ಸಿದ್ದಾಪುರ, ಜ. ೨೬: ರಾಷ್ಟಿçÃಯ ಮತದಾರರ ದಿನ ಪ್ರಯುಕ್ತ ೧೩ನೇ ರಾಷ್ಟಿçÃಯ ಮತದಾರರ ದಿನಾಚರಣೆಯನ್ನು ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಈ ಸಂದರ್ಭ ಸಿದ್ದಾಪುರ ಗ್ರಾ.ಪಂ. ಪಿ.ಡಿ.ಓ ಮನಮೋಹನ್, ಶಾಲಾ ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ, ಬಿ.ಎಲ್.ಓ ಗಳಾದ ಆಶಾ, ವಾಹಿದ, ಸಹನಾ ಹಾಗೂ ಗ್ರಾ.ಪಂ. ಸದಸ್ಯೆ ಪ್ರೇಮ ಹಾಗೂ ಶಾಲಾ ಶಿಕ್ಷಕರು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು. ದಿನದ ಮಹತ್ವದ ಬಗ್ಗೆ ಪಿ.ಡಿ.ಓ ಮನಮೋಹನ್ ಹಾಗೂ ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ ಮಾಹಿತಿ ನೀಡಿದರು.