ಕೂಡಿಗೆ, ಜ. ೨೬: ಕುಶಾಲನಗರದ ಚೌಡೇಶ್ವರಿ ದೇವಸ್ಥಾನದ ಶ್ರೀ ಚೌಡೇಶ್ವರಿ ದೇವಿ ಮತ್ತು ಗಣಪತಿ ವಿಗ್ರಹಕ್ಕೆ ಬೆಳ್ಳಿಯ ಕವಚವನ್ನು ಕುಶಾಲನಗರದ ಡಿ.ಸಿ. ಜಗದೀಶ್ ಮತ್ತು ಹೆಚ್.ಎನ್. ಯೋಗೇಶ್ ನೀಡಿದರು.
ಈ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ಡಿ.ಟಿ. ವಿಜಯೇಂದ್ರ, ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಡಿ.ವಿ. ರಾಜೇಶ್, ಸಹ ಕಾರ್ಯದರ್ಶಿ ಡಿ.ವಿ. ಚಂದ್ರು, ಖಜಾಂಚಿ ಡಿ.ಆರ್. ಕೃಷ್ಣ ಕುಮಾರ್, ದೇವಾಂಗ ಸಂಘದ ಮಹಿಳಾ ಸಂಘದ ಅಧ್ಯಕ್ಷೆ ಸುಲೋಚನಾ ರಂಗಪ್ಪ ಸೇರಿದಂತೆ ದೇವಾಲಯ ಸಮಿತಿಯ ನಿರ್ದೇಶಕರು, ಭಕ್ತಾದಿಗಳು ಹಾಜರಿದ್ದರು.