ಮಡಿಕೇರಿ, ಜ. ೨೬: ಭಾರತೀಯ ಸೇನೆಯಲ್ಲಿ ಪ್ರಸ್ತುತ ಲೆಫ್ಟಿನೆಂಟ್ ಜನರಲ್ ಸ್ಥಾನದಲ್ಲಿರುವ ಕೊಡಗು ಜಿಲ್ಲೆಯವರಾದ ಇಬ್ಬರು ಸೇನಾಧಿಕಾರಿಗಳು ಗಣರಾಜ್ಯೋತ್ಸವ ಸಂದರ್ಭ ಪಿವಿಎಸ್ಎಂ (ಪರಮ ವಿಶಿಷ್ಟ ಸೇವಾ ಮೆಡಲ್) ಬಿರುದು ಪಡೆದುಕೊಂಡಿದ್ದಾರೆ.
ಲೆಫ್ಟಿನೆAಟ್ ಜನರಲ್ ಕೋದಂಡ ಪಿ. ಕಾರ್ಯಪ್ಪ ಹಾಗೂ ಲೆಫ್ಟಿನೆಂಟ್ ಜನರಲ್ ಚೆನ್ನೀರ ಬನ್ಸಿ ಪೊನ್ನಪ್ಪ ಅವರಿಗೆ ಈ ಬಿರುದು ದೊರೆತಿದೆ. ಇಬ್ಬರೂ ಅಧಿಕಾರಿಗಳು ಈ ಹುದ್ದೆಯೊಂದಿಗೆ ಸೇನೆಯಲ್ಲಿ ಇತರ ಗುರುತರ ಜವಾಬ್ದಾರಿ ಹೊಂದಿದವರಾಗಿದ್ದಾರೆ.
ಇಬ್ಬರು ಲೆಫ್ಟಿನೆಂಟ್ ಜನರಲ್ಗಳು ಕೋರ್ ಕಮಾಂರ್ಸ್ ಆಗಿದ್ದಾರೆ. ಕೋದಂಡ ಕಾರ್ಯಪ್ಪ ಅವರು ಮಾಸ್ಟರ್ ಜನರಲ್ ಸಸ್ಟೆನೆಲ್ಸ್ ಹಾಗೂ ಬನ್ಸಿ ಪೊನ್ನಪ್ಪ ಅವರು ಅಡ್ಜುಟೆಂಟ್ ಜನರಲ್ ಆಗಿಯೂ (ಪಿ.ಎಸ್.ಒ) ಹೆಚ್ಚುವರಿ ಕರ್ತವ್ಯದಲ್ಲಿದ್ದಾರೆ. ರಾಷ್ಟçಪತಿ ಭವನದಲ್ಲಿ ಇಂದು ಇಬ್ಬರು ಅಧಿಕಾರಿಗಳು ರಾಷ್ಟçಪತಿ ದ್ರೌಪದಿ ಮುರ್ಮು ಅವರಿಂದ ಪಿವಿಎಸ್ಎಂ ಸ್ವೀಕರಿಸಿದ್ದಾರೆ.