ವೀರಾಜಪೇಟೆ, ಜ. ೨೬: ಗಣರಾಜ್ಯೋತ್ಸವದ ಸಂಭ್ರಮ ದೊಂದಿಗೆ ವೀರಾಜಪೇಟೆ ಪಟ್ಟಣದ ರಸ್ತೆಗಳಿಗೆ ಇಂದು ಸೇನಾಧಿಕಾರಿಗಳ ಹೆಸರನ್ನು ಇಡುವ ಮೂಲಕ

ಇದರ ನಾಮಫಲಕವನ್ನು ಅಳವಡಿಸಲಾಯಿತು.

ಮಹಾವೀರಚಕ್ರ ಪ್ರಶಸ್ತಿ ಪಡೆದಿರುವ ನಿವೃತ್ತ ಸೇನಾಧಿಕಾರಿ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ ಸೇರಿದಂತೆ ದಿವಂಗತರುಗಳಾಗಿರುವ ಜಿಲ್ಲೆಯ ಖ್ಯಾತ ಸೇನಾಧಿಕಾರಿಗಳಾದ ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಹೆಸರನ್ನು ಪಟ್ಟಣದ ರಸ್ತೆಗಳಿಗೆ ನಾಮಕರಣ ಮಾಡಲಾಗಿದೆ.

ಮಾಜಿ ಸೈನಿಕರ ಸಹಕಾರ ಸಂಘ, ಲಯನ್ಸ್ ಕ್ಲಬ್ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಪುರಸಭೆ ವ್ಯಾಪ್ತಿಯ ವೀರಾಜಪೇಟೆಯ ಮೂರ್ನಾಡು-ಮಡಿಕೇರಿ ರಸ್ತೆಗೆ ಮಹಾವೀರಚಕ್ರ ಪುರಸ್ಕೃತ ಕರ್ನಲ್ ಪುಟ್ಟಿಚಂಡ ಗಣಪತಿ ಅವರ ಹೆಸರನ್ನು ನಾಮಕರಣಗೊಳಿಸಿ ನಾಮಫಲಕ ಅನಾವರಣಗೊಳಿಸಲಾಯಿತು. ನಿವೃತ್ತ ಮೇಜರ್ ಜನರಲ್ ಬಾಚಮಂಡ ಕಾರ್ಯಪ್ಪ ಅವರು ನಾಮಫಲಕ ಅನಾವರಣಗೊಳಿಸಿದರು.

ದೊಡ್ಡಟ್ಟಿ ಚೌಕಿಯಿಂದ ಗಡಿಯಾರ ಕಂಬದವರೆಗಿನ ರಸ್ತೆಯನ್ನು ಫೀಲ್ಡ್ ಮಾರ್ಷಲ್ ಕೊಡಂದೆರ ಎಂ. ಕಾರ್ಯಪ್ಪ ರಸ್ತೆ, ಗಡಿಯಾರ ಕಂಬದಿAದ

(ಮೊದಲ ಪುಟದಿಂದ) ಖಾಸಗಿ ಬಸ್ಸು ನಿಲ್ದಾಣದವರೆಗಿನ ರಸ್ತೆಯನ್ನು ಜನರಲ್ ಕೊಡಂದೆರ ಎಸ್. ತಿಮ್ಮಯ್ಯ ರಸ್ತೆ ಎಂದು ನಾಮಕರಣಗೊಳಿಸಿದ್ದು, ಕರ್ನಲ್ ಪುಟ್ಟಿಚಂಡ ಗಣಪತಿ ಅವರು ಈ ನಾಮಫಲಕ ಅನಾವರಣಗೊಳಿಸಿದರು.

೧೯೮೮ರಲ್ಲಿ ಶ್ರೀಲಂಕಾದಲ್ಲಿ ಎಲ್.ಟಿ.ಟಿ.ಇ ಜತೆ ನಡೆದ ಸಂಘರ್ಷದಲ್ಲಿ ಶಾಂತಿ ಪಾಲನಾ ಪಡೆಯ ಭಾರತ ಸೇನೆಯ ನೇತೃತ್ವ ತೆಗೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯ ಗಣಪತಿ ಅವರಿಗೆ ಮಹಾವೀರ ಚಕ್ರ ನೀಡಿ ಗೌರವಿಸಿದೆ. ಸ್ಕಾ÷್ವರ್ಡನ್ ಲೀಡರ್ ಅಜ್ಜಮಾಡ ದೇವಯ್ಯ ಅವರನ್ನು ಹೊರತು ಪಡಿಸಿದರೆ ಕರ್ನಲ್ ಪುಟ್ಟಿಚಂಡ ಗಣಪತಿ ಮಹಾವೀರ ಚಕ್ರ ಪಡೆದ ಜಿಲ್ಲೆಯ ಎರಡನೆಯವರಾಗಿದ್ದಾರೆ.

ಅವರ ಹೆಸರನ್ನು ಮೂರ್ನಾಡು ರಸ್ತೆಗೆ ನಾಮಕರಣ ಮಾಡುವ ಸಂದರ್ಭ ಮಾಜಿ ಸೈನಿಕರು ಹಾಗೂ ಅವರ ಕುಟುಂಬ ವರ್ಗದವರು ಹಾಜರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪುಟ್ಟಿಚಂಡ ನರೇಂದ್ರ, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್, ಮಾಜಿ ಅಧ್ಯಕ್ಷ ಗಣೇಶ್ ನಂಜಪ್ಪ, ಕಾರ್ಯದರ್ಶಿ ಪುಗ್ಗೆರ ನಂದಾ, ಖಜಾಂಚಿ ತೋರೇರ ಪೂವಯ್ಯ, ಮಾಜಿ ಉಪಾಧ್ಯಕ್ಷ ಪಟ್ರಪಂಡ ರಮೇಶ್ ಕರುಂಬಯ್ಯ, ಪಿ.ಜಿ. ಅಯ್ಯಪ್ಪ ಸೇರಿದಂತೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೂಕೋಂಡ ಶಶಿ ಸುಬ್ರಮಣಿ, ಕೊಡಗು ಮುಸ್ಲಿಂ ಅಸೋಷಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ, ಪುರಸಭೆ ಅಧ್ಯಕ್ಷೆ ಸುಶ್ಮಿತಾ ಹಾಗೂ ಪುರಸಭೆ ಸದಸ್ಯರುಗಳು, ಲಯನ್ಸ್ ಕ್ಲಬ್ ಹಾಗೂ ಮಾಜಿ ಸೈನಿಕರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.