ಮಡಿಕೇರಿ, ಜ. ೨೬: ಮಡಿಕೇರಿ - ಮಂಗಳೂರು ಹೆದ್ದಾರಿ ನಡುವೆ ಇರುವ ಮದೆನಾಡು ಎಂಬ ಪುಟ್ಟ ಊರಿನಲ್ಲಿ ಇಂದು ಹಬ್ಬದ ವಾತಾವರಣ ಕಳೆಗಟ್ಟಿತ್ತು. ದೇಶದೆಲ್ಲೆಡೆ ಗಣರಾಜ್ಯೋತ್ಸವ ಪ್ರಯುಕ್ತ ಹಲವಾರು ಕಾರ್ಯಕ್ರಮಗಳು ಆಯೋಜನೆಗೊಂಡಿತ್ತಾದರೂ ಮದೆನಾಡಿನಲ್ಲಿ ಏರ್ಪಡಿಸಲಾಗಿದ್ದ ಯೋಧ ವಂದನಾ ಎಂಬ ಕಾರ್ಯಕ್ರಮದಲ್ಲಿ ದೇಶ ರಕ್ಷಣೆಯಲ್ಲಿ ಸೇವೆ ಸಲ್ಲಿಸುವ ಯೋಧರ ಸ್ಮರಣೆಯೊಂದಿಗೆ ಗೌರವಾರ್ಪಣೆ ಮಾಡಲಾಯಿತು.
ಮದೆನಾಡು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಹಾಗೂ ಯೋಧ ವಂದನಾ ಕಾರ್ಯಕ್ರಮದಲ್ಲಿ ಮದೆನಾಡು ವಿಎಸ್ಎಸ್ಎನ್ ವ್ಯಾಪ್ತಿಗೆ ಒಳಪಡುವ ಮದೆನಾಡು, ಕಾಟಕೇರಿ, ತಾಳತ್ತಮನೆ, ಜೋಡುಪಾಲ, ದೇವರಕೊಲ್ಲಿ, ಎರಡನೇ ಮೊಣ್ಣಂಗೇರಿ ಗ್ರಾಮಗಳ ಸ್ಮರಣೆಯೊಂದಿಗೆ ಗೌರವಾರ್ಪಣೆ ಮಾಡಲಾಯಿತು.
ಮದೆನಾಡು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಹಾಗೂ ಯೋಧ ವಂದನಾ ಕಾರ್ಯಕ್ರಮದಲ್ಲಿ ಮದೆನಾಡು ವಿಎಸ್ಎಸ್ಎನ್ ವ್ಯಾಪ್ತಿಗೆ ಒಳಪಡುವ ಮದೆನಾಡು, ಕಾಟಕೇರಿ, ತಾಳತ್ತಮನೆ, ಜೋಡುಪಾಲ, ದೇವರಕೊಲ್ಲಿ, ಎರಡನೇ ಮೊಣ್ಣಂಗೇರಿ ಗ್ರಾಮಗಳ ಸ್ಮರಣೆಯೊಂದಿಗೆ ಗೌರವಾರ್ಪಣೆ ಮಾಡಲಾಯಿತು.
ಮದೆನಾಡು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಹಾಗೂ ಯೋಧ ವಂದನಾ ಕಾರ್ಯಕ್ರಮದಲ್ಲಿ ಮದೆನಾಡು ವಿಎಸ್ಎಸ್ಎನ್ ವ್ಯಾಪ್ತಿಗೆ ಒಳಪಡುವ ಮದೆನಾಡು, ಕಾಟಕೇರಿ, ತಾಳತ್ತಮನೆ, ಜೋಡುಪಾಲ, ದೇವರಕೊಲ್ಲಿ, ಎರಡನೇ ಮೊಣ್ಣಂಗೇರಿ ಗ್ರಾಮಗಳ (ಮೊದಲ ಪುಟದಿಂದ) ದೇಶದಲ್ಲಿ ಜಾತಿ, ಮತ, ಮೇಲು ಕೀಳು ಎಂಬ ಭಾವನೆಗಳು ಹೆಚ್ಚಾಗುತ್ತಿರುವುದರಿಂದ ಭಾರತೀಯ ಎಲ್ಲಿದ್ದಾನೆ ಎಂದು ಹುಡುಕುವಂತಾಗಿದೆ ಎಂದು ವಿಷಾದಿಸಿದರು. ಯಾವುದೇ ಬೇಧ ಭಾವವಿಲ್ಲದೆ ಇಲ್ಲದಿರುವ ಕ್ಷೇತ್ರವೆಂದರೆ ಅದು ಸೇನಾ ಕ್ಷೇತ್ರ ಮಾತ್ರ. ಆದ್ದರಿಂದ ಸೈನಿಕರಿಂದ ನಾವು ದೇಶಾಭಿಮಾನದ ಪಾಠ ಕಲಿಯಬೇಕೆಂದರು. ಸ್ವಾತಂತ್ರö್ಯ ಎಂದರೆ ಸ್ವಚ್ಛಂದತೆ ಅಲ್ಲ; ಅದೊಂದು ಜವಾಬ್ದಾರಿ ಎಂಬುದನ್ನು ಅರಿತಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದರು. ಮಕ್ಕಳಿಗೆ ಪೋಷಕರು ಸಂಸ್ಕಾರದ ಪಾಠ ಕಲಿಸಬೇಕೆಂದು ಕಿವಿಮಾತು ಹೇಳಿದರು.
ಯೋಧ ವಂದನಾ ಭಾಷಣ ಮಾಡಿದ ಮೈಸೂರಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ಮಾತನಾಡಿ, ಯಾರು ಪರರಿಗಾಗಿ ಬದುಕುತ್ತಾರೊ ಅವರ ಬದುಕು ಸಾರ್ಥಕವೆನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ದೇಶಕ್ಕಾಗಿ ದುಡಿಯುವ ಯೋಧರು ಹಾಗೂ ರೈತರದ್ದು ಸಾರ್ಥಕ್ಯ ಜೀವನ ಎಂದು ಹೇಳಿದರು. ಯೋಧರ ಹಾಗೂ ರೈತರ ಶ್ರಮ ಸದಾ ಸ್ಮರಣೀಯ ಎಂದು ಅವರು ನುಡಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಮದೆ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಧನಂಜಯ ಅಗೊಳಿಕಜೆ, ಯೋಧರಿಂದಾಗಿ ದೇಶ ಸುಭದ್ರವಾಗಿದೆ. ಅವರ ಶ್ರಮದಿಂದ ನಾವೆಲ್ಲರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಯೋಧ ವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ನಿವೃತ್ತ ಸೇನಾಧಿಕಾರಿ ಕ್ಯಾ. ಹುಲಿಮನೆ ಡಿ. ಹರೀಶ್ಕುಮಾರ್, ಮದೆ ಗ್ರಾ.ಪಂ. ಅಧ್ಯಕ್ಷ ನಡುಗಲ್ಲು ಪಿ. ರಾಮಯ್ಯ, ಮದೆ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರುಗಳು ಮತ್ತಿತರರು ಉಪಸ್ಥಿತರಿದ್ದರು. ಸಾಹಿತಿ ಬಾರಿಯಂಡ ಆರ್. ಜೋಯಪ್ಪ ಯೋಧರ ಸೇವೆ ತ್ಯಾಗದ ಕುರಿತಾದ ಕವನ ವಾಚಿಸಿದರು. ಅಗಲಿದ ಯೋಧರಿಗೆ ಮೌನಾಚರಣೆ ಮೂಲಕ ನಮಿಸಲಾಯಿತು. ಬಿಂದು ಹುಲಿಮನೆ ಪ್ರಾರ್ಥಿಸಿ, ವಿಠಲ್ ನಿರೂಪಿಸಿ, ಭಾಗೀರಥಿ ವಂದಿಸಿದರು.