*ಗೋಣಿಕೊಪ್ಪ, ಜ. ೨೫: ರೈತರಿಗೆ ಹೆಚ್ಚಿನ ಅನುಕೂಲ ಮತ್ತು ಇತರ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಥಮಿಕ ಕೃಷಿಪತ್ತ್ತಿನ ಸಹಕಾರ ಸಂಘಗಳನ್ನು ಏಕ ಮಾದರಿ ಬೈಲಾದಡಿಯಲ್ಲಿ ತರುವ ಪ್ರಯತ್ನ ನಡೆಯುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡಿದರು.
ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು ಒಂದೇ ಬೈಲಾದಡಿಯಲ್ಲಿ ಕಾರ್ಯನಿರ್ವಹಿಸಿದರೆ ಸಂಘ ಅರ್ಥಿಕವಾಗಿ ಮುಂದುವರಿಯಲು ಸಾಧÀ್ಯವಾಗುವುದರ ಜೊತೆಗೆ ರೈತರಿಗೆ ಹೆಚ್ಚಿನ ಅನುಕೂಲ ಲಭ್ಯವಾಗಲಿದೆ. ಸಂಘ ಅಭಿವೃದ್ಧಿ ಕಾಣಲು ಪೆಟ್ರೋಲ್ ಬಂಕ್, ಕಲ್ಯಾಣ ಮಂಟಪ, ಸಭಾಂಗಣ, ಸೇರಿದಂತೆ ಹಲವು ಸೌಕರ್ಯಗಳನ್ನು ಹೊಂದಿಸಿಕೊಳ್ಳುವ ನೇರ ಅಧಿಕಾರ ಈ ನಿಯಮದಿಂದ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ೨೪ ಸಾವಿರ ಕೋಟಿ ಸಾಲ ಸೌಲಭ್ಯವನ್ನು ಸಹಕಾರ ಸದಸ್ಯರುಗಳಿಗೆ ಒದಗಿಸಲು ಬಜೆಟ್ ಮಂಡಿಸಿದೆ. ಸುಮಾರು ೨೦ ಲಕ್ಷ ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿ ಯಾಗಲಿದೆ. ಸುಮಾರು ೫೧ ಸಾವಿರ ರೈತರು ಸಾಲ ಮನ್ನಾಕ್ಕಾಗಿ ಅರ್ಜಿ ಸಲ್ಲಿಸಿದ್ದು, ತೆರಿಗೆ ಪಾವತಿಯಲ್ಲಿನ ನಿಯಮಗಳಿಂದಾಗಿ ಸಾಲಮನ್ನಾ ಸಾಧ್ಯವಾಗಿರಲಿಲ್ಲ. ಇದೀಗ ಸುಮಾರು ೩೧ ಸಾವಿರ ರೈತರನ್ನು ಹಸಿರು ಪಟ್ಟಿಗೆ ತಂದು ಸಾಲ ಮನ್ನಾ ಮಾಡಲಾಗಿದೆ. ರಾಜ್ಯದಲ್ಲಿರುವ ೫೭೦೦ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ೭೬೦೦ ಸಂಘಗಳು ರೈತರಿಗೆ ಸುರಕ್ಷಾ ಮತ್ತು ಸೌಲಭ್ಯಗಳನ್ನು ನೀಡುತ್ತಿದೆ. ಈ ಕಾರಣದಿಂದ ಒಂದೇ ಬೈಲಾದಡಿಯಲ್ಲಿ ಸಹಕಾರ ಸಂಘಗಳ ಕಾರ್ಯನಿರ್ವಹಣೆಯ ನಿಯಮವನ್ನು ತರುವ ಮೂಲಕ ಸಹಕಾರ ಸಂಘಗಳ ಅಭಿವೃದ್ಧಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗುವುದು. ಸಂಘಗಳಿಗೆ
(ಮೊದಲ ಪುಟದಿಂದ) ಹೆಚ್ಚಿನ ಅಧಿಕಾರ ನೀಡಲಾಗುವುದು. ವ್ಯವಹಾರ ಕ್ಷೇತ್ರ ವಿಸ್ತರಿಸಿಕೊಳ್ಳಲು ಪೂರಕವಾಗಿ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಮಹಿಳಾ ಸಹಕಾರ ಸಂಘಗಳ ಸಾಲಮನ್ನಾವನ್ನು ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಎಂದು ಚುನಾವಣೆ ಅಸ್ತçವಾಗಿ ಬಳಸಿಕೊಳ್ಳುತ್ತಿದೆ. ಸ್ತಿçà ಶಕ್ತಿ ಸಂಘಗಳು ಪಡೆದ ಸಾಲವನ್ನು ನಿಯಮಿತವಾಗಿ ಪಾವತಿಸುವ ಮೂಲಕ ಸಹಕಾರ ಸಂಘಗಳ ಏಳಿಗೆಗೆ ಕಾರಣೀಭೂತರಾಗಿದ್ದಾರೆ. ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ವ್ಯವಸ್ಥೆಯನ್ನು ಹದಗೆಡಿಸುವ ಹುನ್ನಾರವನ್ನು ವಿರೋಧ ಪಕ್ಷ ನಡೆಸುತ್ತಿದೆ ಎಂದು ಹೇಳಿದರು.
ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧÀ್ಯಕ್ಷರು ಮತ್ತು ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಕಾಫಿ ಬೆಳೆಗಾರರು ಅತಿವೃಷ್ಠಿಯಿಂದ ನಷ್ಟಕ್ಕೆ ಒಳಗಾಗಿರುವುದನ್ನು ಪರಿಗಣಿಸಿ ಕೊಡಗನ್ನು ಅತಿವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಿಸಿದ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ೪೮ ಸಾವಿರ ರೈತರಿಗೆ ತಲಾ ೫೨ ಸಾವಿರದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಒಟ್ಟು ೧೫೨ ಕೋಟಿ ಪರಿಹಾರಧನ ರೈತರ ಖಾತೆಗೆ ನೇರವಾಗಿ ಜಮಾ ಆಗಿದೆ. ಉಳಿದ ರೈತರಿಗೆ ಪರಿಹಾರ ಧನ ಸಿಗದೇ ಇರಲು ಕೆಲವು ತಾಂತ್ರಿಕ ದೋಷಗಳು ಪ್ರಮುಖ ಕಾರಣವಾಗಿವೆ ಎಂದು ಹೇಳಿದರು.
ಹಾತೂರು ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೊಡಂದೇರ ಪಿ ಬಾಂಡ್ ಗಣಪತಿ ಮಾತನಾಡಿ, ಕಾಫಿ ಬೆಳೆಗಾರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸಹಕಾರ ಸಂಘ ಹೆಚ್ಚಿನ ಸೌಕರ್ಯಗಳನ್ನು ಮತ್ತು ಅನುದಾನವನ್ನು ಒದಗಿಸಿಕೊಡಬೇಕಾಗಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ಹಾತೂರು ಗ್ರಾ.ಪಂ. ಅಧ್ಯಕ್ಷ ಗುಮ್ಮಟ್ಟೀರ ದರ್ಶನ್ ನಂಜಪ್ಪ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್ ಹರೀಶ್ ಪೂವಯ್ಯ, ಹಾತೂರು ಪ್ರಾಥಮಿಕ ಕೃಷಿ ಸಹಕಾರ ಸಂಘದ ಉಪಾಧÀ್ಯಕ್ಷ ಸೋಮೆಯಂಡ ಕೆ. ಮಂದಣ್ಣ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರುಗಳಾದ ಪಟ್ರಪಂಡ ರಘು ನಾಣಯ್ಯ, ಹೊಟ್ಟೇಂಗಡ ಎಂ. ರಮೇಶ್, ಹೊಸೂರು ಜೆ. ಸತೀಶ್‌ಕುಮಾರ್, ಕನ್ನಂಡ ಎ. ಸಂಪತ್, ಕಿಮ್ಮುಡೀರ ಎ. ಜಗದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್ ಕೃಷ್ಣಪ್ರಸಾದ್, ಸಹಾಯಕ ಅಧಿಕಾರಿ ಮೋಹನ್, ವೀರಾಜಪೇಟೆ ತಾಲೂಕು ಅಭಿವೃದ್ಧಿ ಅಧಿಕಾರಿ ಎ.ಎಸ್ ಮೋಹನ್, ಹಾತೂರು ಪ್ರಾಥಮಿಕ ಕೃಷಿ ಸಹಕಾರ ಸಂಘದ ನಿರ್ದೇಶಕರುಗಳಾದ ಸಿ.ಎಸ್. ಬೋಪಣ್ಣ, ಹೆಚ್.ಡಿ ಶ್ರೀನಿವಾಸ್, ಎಂ.ಟಿ ಅಯ್ಯಪ್ಪ, ಕೆ.ಬಿ ಉತ್ತಪ್ಪ, ಪಿ.ಡಿ ದಿನೇಶ್, ಬಿ.ಎ ದುಗ್ಗಪ್ಪ, ಕೆ.ವಿ ಮುತ್ತಣ್ಣ, ಸಿ.ಜೆ ರೂಪ, ಕೆ.ಎಂ ಕಾವೇರಮ್ಮ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಎಂ. ಪ್ರದೀಪ್ ಸೇರಿದಂತೆ ಸಂಘದ ಸಿಬ್ಬಂದಿಗಳು, ಸ್ಥಳೀಯ ಗ್ರಾಮಸ್ಥರು, ಗ್ರಾಪಂ ಸದಸ್ಯರುಗಳು ಇದ್ದರು.