ಮಡಿಕೇರಿ, ಜ. ೨೬: ನಾಪೋಕ್ಲು ಸಮೀಪದ ಕೊಳಕೇರಿ ಉರೂಸ್ ತಾ. ೨೭ ರಂದು (ಇಂದು) ಪ್ರಾರಂಭ ಗೊಳ್ಳಲಿದೆ. ಮಧ್ಯಾಹ್ನ ೨ ಗಂಟೆಗೆ ಸಾಮೂಹಿಕ ಪ್ರಾರ್ಥನೆ ಹಾಗೂ ಮಖಾಂ ಅಲಂಕಾರ ನಡೆಯಲಿದ್ದು, ಕೊಳಕೇರಿ ಸುನ್ನಿ ಮುಸ್ಲಿಂ ಜಮಾ ಅತ್ನ ಧರ್ಮಗುರು ರವೂಫ್ಸಖಾಫಿ ನೇತೃತ್ವ ವಹಿಸಲಿದ್ದಾರೆ.
ಸಂಜೆ ೭ ಗಂಟೆಗೆ ಕುಂಬೋಲ್ನ ಸಯ್ಯಿದ್ ಜಹಫರ್ ಸಾಧಿಕ್ ಅವರ ನೇತೃತ್ವದಲ್ಲಿ ಜಲಾಲಿಯಾ ರಾತೀಬ್ ನಡೆಯಲಿದೆ. ತಾ. ೨೮ ರಂದು ಪಾತೂರ್ ಅಬ್ದುಲ್ ಜಬ್ಬಾರ್ ಸಖಾಫಿ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ತಾ. ೨೯ ರಂದು ರಾತ್ರಿ ಕಳಸ ನೌಫಲ್ ಸಖಾಫಿ ಅವರಿಂದ ಧಾರ್ಮಿಕ ಉಪನ್ಯಾಸ, ತಾ. ೩೦ ರಂದು ಪೂರ್ವಾಹ್ನ ೧೧ ಗಂಟೆಗೆ ಧರ್ಮಗುರು ಸೆಯ್ಯದ್ ಕೂರಾತಂಙಳ್ ಅವರ ನೇತೃತ್ವದಲ್ಲಿ ಪ್ರಾರ್ಥನಾ ಸಂಗಮ ನೆರವೇರಲಿದೆ. ಅದೇ ದಿನ ರಾತ್ರಿ ೭ ಗಂಟೆಗೆ ಸಯ್ಯಿದ್ ಶಿಹಾಬುದ್ದೀನ್ ಮುತನ್ನೂರ್ ತಂಙಳ್ ಅವರ ನೇತೃತ್ವದಲ್ಲಿ ಖತಂದುಆ ದಿಕ್ರ್ ಹಲ್ಖಾಮಜ್ಲಿಸ್ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಸಾರ್ವಜನಿಕರಿಗೆ ಅನ್ನದಾನವಿದೆ ಎಂದು ಜಮಾತ್ನ ಆಡಳಿತ ಮಂಡಳಿ ತಿಳಿಸಿದೆ.