ಮಡಿಕೇರಿ, ಜ. ೨೫: ಕೇಂದ್ರ ಸರಕಾರದಿಂದ ಕೊಡಮಾಡುವ ೪ನೇ ಅತೀದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಗೌರವವನ್ನು ಕೊಡಗಿನ ಮಡಿಕೇರಿಯ ನಿವಾಸಿ, ಹಿರಿಯ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಪಡೆದುಕೊಂಡಿದ್ದಾರೆ.
ಕೇಂದ್ರ ಸರಕಾರ ಪ್ರಶಸ್ತಿ ಪ್ರಕಟಿಸಿದ್ದು, ಉಮ್ಮತಾಟ್ ನೃತ್ಯ ಪ್ರಕಾರವನ್ನು ಹಲವರಿಗೆ ತರಬೇತಿ ನೀಡಿದ ಹಿನ್ನೆಲೆ ರಾಣಿ ಮಾಚಯ್ಯ ಅವರಿಗೆ ಪ್ರಶಸ್ತಿ ಸಂದಿದೆ.
ಬಾಲ್ಯದಿಂದಲೂ ಕೊಡವ ಜನಪದ ಕಲಾ ಪ್ರಕಾರಗಳಾದ ಕೋಲಾಟ್, ಉಮ್ಮತಾಟ್ ಸೇರಿದಂತೆ ಭರತನಾಟ್ಯ ಬುಡಕಟ್ಟು ಜನಾಂಗದ ನೃತ್ಯ, ಕನ್ನಡ ನಾಡು-ನುಡಿ ಬಿಂಬಿಸುವ ನೃತ್ಯ ಶೈಲಿಗಳನ್ನು ವೇದಿಕೆಗಳಲ್ಲಿ ಪ್ರರ‍್ಶನ ಮಾಡುವುದರೊಂದಿಗೆ ಜಿಲ್ಲೆಯಲ್ಲಿ ಕಾವೇರಿ ಕಲಾವೃಂದ ಎಂಬ ತಂಡ ಕಟ್ಟಿ ದೇಶದ ವಿವಿಧೆಡೆಗಳಲ್ಲಿ ಕಲಾ ವೈವಿಧ್ಯ ಅನಾವರಣ ಮಾಡಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ಈ ಗೌರವ ರಾಣಿ ಮಾಚಯ್ಯ ಅವರಿಗೆ ದೊರೆತಿದೆ.
ಸಿದ್ದಾಪುರದಲ್ಲಿ ಜನಿಸಿ, ಕಾಕೋಟುಪರಂಬುವಿನಲ್ಲಿ ಬೆಳೆದ ಇವರು ವಕೀಲ ದಿ. ಐ.ಟಿ. ಮಾಚಯ್ಯ ಅವರ ಪತ್ನಿಯಾಗಿದ್ದು, ಪ್ರಸ್ತುತ ಮಡಿಕೇರಿಯ ಹಿಲ್ ರಸ್ತೆಯಲ್ಲಿ ನೆಲೆಸಿದ್ದಾರೆ. (ಮೊದಲ ಪುಟದಿಂದ) ಈ ಬಗ್ಗೆ 'ಶಕ್ತಿ'ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರಶಸ್ತಿ ಘೋಷಣೆ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮಾಧ್ಯಮಗಳಿಂದ ವಿಷಯ ತಿಳಿದು ಬಂದಿದೆ. ಜಾತಿ, ಧರ್ಮ ಇಲ್ಲದೆ ಕಲಾಸಕ್ತರಿಗೆ ನೃತ್ಯ ಕಲಿಸಿದ್ದೇನೆ. ತನ್ನ ಸೇವೆ ಗುರುತಿಸಿ ಕೇಂದ್ರ ಸರಕಾರ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಿದ್ದಾಪುರದಲ್ಲಿ ಜನಿಸಿ, ಕಾಕೋಟುಪರಂಬುವಿನಲ್ಲಿ ಬೆಳೆದ ಇವರು ವಕೀಲ ದಿ. ಐ.ಟಿ. ಮಾಚಯ್ಯ ಅವರ ಪತ್ನಿಯಾಗಿದ್ದು, ಪ್ರಸ್ತುತ ಮಡಿಕೇರಿಯ ಹಿಲ್ ರಸ್ತೆಯಲ್ಲಿ ನೆಲೆಸಿದ್ದಾರೆ.