ಕುಶಾಲನಗರ, ಜ. ೨೪: ಸರ್ಕಾರ ಟೈಲರ್ ಕ್ಷೇಮನಿಧಿ ಮಂಡಳಿ ರಚಿಸಬೇಕು. ಭವಿಷ್ಯನಿಧಿ, ಆರೋಗ್ಯ ವಿಮೆಯನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಬಿ.ಎ. ನಾರಾಯಣ ಆಗ್ರಹಿಸಿದರು. ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಸ್ಥಳೀಯ ಮಹಿಳಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಟೈಲರ್ಸ್ ಅಸೋಸಿ ಯೇಷನ್ ಕುಶಾಲನಗರ ವಲಯ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಎಸ್ಟಿಎ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ವಿಜಯ್ ಮಾತನಾಡಿ, ಸಮಾಜದಲ್ಲಿ ಅಸಂಘಟಿತರಾಗಿ ದುಡಿಯುತ್ತಿರುವ ಟೈಲರ್ಸ್ಗಳ ಕ್ಷೇಮಾಭಿವೃದ್ಧಿಗಾಗಿ ಸರಕಾರ ಕ್ಷೇಮನಿಧಿ ರಚಿಸಿ ಆ ಮೂಲಕ ಭವಿಷ್ಯನಿಧಿ ಮತ್ತು ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕುಶಾಲನಗರ ವಲಯದ ಅಧ್ಯಕ್ಷ ಭಾಷ, ಕೆಎಸ್ಟಿಎ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಸಹ ಕಾರ್ಯದರ್ಶಿ ಸುಧಾಕರ್, ಕೊಡಗು ಘಟಕದ ಅಧ್ಯಕ್ಷ ಎಸ್.ಸಿ. ನಂದೀಶ್, ಗೌರವಾಧ್ಯಕ್ಷ ಶೇಕ್ ಅಹಮ್ಮದ್, ಬಿ.ಎನ್. ಮಂಜುನಾಥ್, ಉಪಾಧ್ಯಕ್ಷೆ ವಸಂತಿ ಬೋಜಿ, ಪ್ರಧಾನ ಕಾರ್ಯದರ್ಶಿ ಪೈರೋಜ್ ಅಹಮ್ಮದ್, ಖಜಾಂಚಿ ರೊನಾಲ್ಡೊ ಮುಖಂಡರಾದ ಆನಂದ್, ಚಂದ್ರಶೇಖರ್, ಪಿತಾಂಬರ ಗೌಡ, ಹಬೀಬಿನ್ನೀಸ, ಶಾರದಾ ಇದ್ದರು.