ಸಿದ್ದಾಪುರ, ಜ. ೨೪: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಲ್ಲೆಗೊಳಗಾದ ಘಟನೆ ನಡೆದಿದೆ. ನೆಲ್ಲಿಹುದಿಕೇರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್‌ಕುಮಾರ್ ಎಂಬವರು ಫಲಾನುಭವಿಯೊಬ್ಬರ ಮನೆಯ ಜಿಪಿಎಸ್ ಚಿತ್ರವನ್ನು ಸೆರೆಹಿಡಿಯಲು ಹೋದ ಸಂದರ್ಭದಲ್ಲಿ ಮನೆಯ ಸಮೀಪದ ನಿವಾಸಿ ಶಿವಕುಮಾರ್ ಹಾಗೂ ಪದ್ಮನಾಭ ಎಂಬವರುಗಳು ಅನಿಲ್ ಕುಮಾರ್ ಅವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವುದಾಗಿ ಅನಿಲ್ ಕುಮಾರ್ ಪೊಲೀಸ್ ದೂರು ನೀಡಿದ್ದಾರೆ.