ಮುಳ್ಳೂರು, ಜ. ೨೫: ‘ಜಾತ್ರೋತ್ಸವಗಳು ಧರ್ಮ, ಜಾತಿ ಜನಾಂಗಗಳ ಬೇದಭಾವ ಇಲ್ಲದ ಸಾಮೂಹಿಕ ಸಮ್ಮಿಲನದ ಕೇಂದ್ರ’ ಎಂದು ಶನಿವಾರಸಂತೆ ವೃತ್ತ ನಿರೀಕ್ಷಕ ಮುಳ್ಳೂರು, ಜ. ೨೫: ‘ಜಾತ್ರೋತ್ಸವಗಳು ಧರ್ಮ, ಜಾತಿ ಜನಾಂಗಗಳ ಬೇದಭಾವ ಇಲ್ಲದ ಸಾಮೂಹಿಕ ಸಮ್ಮಿಲನದ ಕೇಂದ್ರ’ ಎಂದು ಶನಿವಾರಸಂತೆ ವೃತ್ತ ನಿರೀಕ್ಷಕ ಮತ್ತು ತುಮಕೂರು ಸಿದ್ಧಗಂಗಾ ಮಠಾಧೀಶ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ೪ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆ ರೈತರು ಟ್ರಾಕ್ಟರ್, ಟಿಲ್ಲರ್ ಇತರೆ ಯಂತ್ರೋಪಕರಣಗಳ ಮೂಲಕ ಕೃಷಿ ಮಾಡುತ್ತಿದ್ದು ಜಾನುವಾರುಗಳ ಸಾಕಾಣಿಕೆ ಮಾಡುತ್ತಿಲ್ಲ ಎಂದ ಅವರು ಕಳೆದ ೨ ವರ್ಷ ಕೋವಿಡ್ ಇದ್ದ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆ ನಡೆಸಿರಲಿಲ್ಲ. ಇದೀಗ ಜಾತ್ರ ಸಮಿತಿಯವರು ಮತ್ತೆ ಜಾನುವಾರುಗಳ ಜಾತ್ರೆ ನಡೆಸುತ್ತಿರುವುದು ಶ್ಲಾಘನಿಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ

(ಮೊದಲ ಪುಟದಿಂದ) ಮಾತನಾಡಿ, ವೈಜ್ಞಾನಿಕ ಭರಾಟೆಯಲ್ಲಿ ರೈತರು ಜಾನುವಾರುಗಳನ್ನು ಸಾಕುವುದನ್ನು ಕಡಿಮೆ ಮಾಡಿದ್ದಾರೆ. ೭೮ ವರ್ಷಗಳನ್ನು ಹಿನ್ನೆಲೆಯುಳ್ಳ ರಾಜ್ಯದಲ್ಲೆ ಹೆಸರುಗಳಿಸಿದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆ ಇಂದು ಸೊರಗುತ್ತಿರುವುದು ವಿಷಾದನೀಯ ಎಂದರು. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ರೈತರು ಪ್ರತಿ ಮನೆಗಳಲ್ಲಿ ಸಾಕುತ್ತಿಲ್ಲ. ಎತ್ತು, ಹಸು ಮುಂತಾದ ಜಾನುವಾರುಗಳನ್ನು ಸಾಕಾಣಿಕೆ ಮಾಡುತ್ತಿದ್ದರು. ಆದರೆ ಇಂದು ಜಾನುವಾರುಗಳನ್ನು ಸಾಕುತ್ತಿಲ್ಲ. ಗೋವುಗಳು ಮೇಯಲು ಜಾಗವು ಇಲ್ಲದಂತಾಗಿದೆ ಎಂದ ಅವರು, ಲಿಂಗೈಕ್ಯ ಸ್ವಾಮೀಜಿ ಶಿವಕುಮಾರ ಸ್ವಾಮೀಜಿಗಳು ಜ್ಞಾನ, ದಾಸೋಹ ಸೇವೆಗಳ ಮೂಲಕ ಜಗತ್ತಿಗೆ ಮಾದರಿಯಾಗಿದ್ದರು ಎಂದು ಸ್ಮರಿಸಿದರು.

ವೇದಿಕೆಯಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಜಾತ್ರಾ ಸಮಿತಿ ಅಧ್ಯಕ್ಷ ವಿನಿತ್‌ಕುಮಾರ್, ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಮಹದೇವಮ್ಮ, ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಕಿರಣ್, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಹಂಡ್ಲಿ, ಶನಿವಾರಸಂತೆ, ನಿಡ್ತ ಗ್ರಾ.ಪಂ.ಸದಸ್ಯರು, ಜಾತ್ರಾ ಸಮಿತಿ ಸದಸ್ಯರು ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ಲಿಂಗೈಕ್ಯ ಸ್ವಾಮೀಜಿಗಳ ಪುಣ್ಯಸ್ಮರಣೆ ಅಂಗವಾಗಿ ಶನಿವಾರಸಂತೆ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿಮಂಟಪದಿAದ ಶ್ರೀಗಳ ಭಾವಚಿತ್ರವನ್ನು ತೆರೆದ ವಾಹನದಲ್ಲಿಟ್ಟು ವಾದ್ಯಗೋಷ್ಠಿ, ನಂದಿಧ್ವಜ, ವೀರಗಾಸೆ ಕುಣಿತದೊಂದಿಗೆ ಪಟ್ಟಣದ ಮುಖ್ಯ ರಸ್ತೆ ಮೂಲಕ ಸಾಗಿದ ಶೋಭಯಾತ್ರೆಯು ಗುಡುಗಳಲೆ ಜಂಕ್ಷನ್‌ನಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜಾನುವಾರುಗಳನ್ನು ಪೂಜಿಸಿದ ಬಳಿಕ ದೇವರನ್ನು ಅಡ್ಡಪಲ್ಲಕಿಯಲ್ಲಿ ಕೂರಿಸಿ ಅಡ್ಡಪಲ್ಲಕಿ ಮೆರವಣಿಗೆ ಮೂಲಕ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಬಸವೇಶ್ವರ ದೇವಾಲಯವನ್ನು ಪ್ರವೇಶಿಸಲಾಯಿತು. ಶೋಭಯಾತ್ರೆಯಲ್ಲಿ ವಿವಿಧ ಸ್ವಾಮೀಜಿಗಳು, ಪ್ರಮುಖರು ಪಾಲ್ಗೊಂಡಿದ್ದರು.