ಗೋಣಿಕೊಪ್ಪ ವರದಿ, ಜ. ೨೫: ಬೈತೂರಿನಲ್ಲಿ ೧೨ ಸಾವಿರ ತೆಂಗಿನ ಕಾಯಿ ಸಮರ್ಪಣೆ ಮಾಡಲಾಯಿತು.
ಕೊಡಗು ದೈವಗಳ ಮೂಲ ಸ್ಥಾನ ಕೇರಳ ರಾಜ್ಯದ ಉಳಿಕಲ್‌ನಲ್ಲಿರುವ ಕಲಿಯಾರ್ ವಯತ್ತೂರ್ (ಆದಿ ಬೈತೂರು) ಸ್ಥಾನದಲ್ಲಿ ವಿಶೇಷತೆಗೆ ಕಾರಣವಾಯಿತು. ಕೊಡಗಿನ ಭಕ್ತರು ಹೆಚ್ಚಾಗಿ ಅರ್ಪಿಸಿದ ತೆಂಗಿನಕಾಯಿ ಏಕಕಾಲದಲ್ಲಿ ದೇವರಿಗೆ ಸಮರ್ಪಿಸಲಾಯಿತು. ಪತ್ತೂಟ್ ಆಚರಣೆಯಲ್ಲಿ ಆನೆ ಮೇಲೆ ದೇವರ ಪ್ರದಕ್ಷಿಣೆ ಭಕ್ತಿಭಾವ ಹೆಚ್ಚಿಸಿತು.
ವರ್ಷಂಪ್ರತಿ ೧, ೨ ಸಾವಿರ ತೆಂಗಿನಕಾಯಿ ಒಡೆಯುವ ಸಂಪ್ರದಾಯವಿದ್ದು, ಈ ವರ್ಷ ೧೨ ಸಾವಿರ ತೆಂಗಿನಕಾಯಿಯನ್ನು ಬೇಟೆ ಕುರುಮನ್‌ಗೆ ಅರ್ಪಣೆ ಮಾಡಲಾಯಿತು. ಸೋಮವಾರ ಒಯಿಂಬದೂಟ್ ಕಾರ್ಯ ಆಚರಿಸಿ ತಡರಾತ್ರಿ ದೇವಸ್ಥಾನದ ಸಮೀಪವಿರುವ ಸ್ಥಾನದಲ್ಲಿ ಏಕಕಾಲ ದಲ್ಲಿ ತಡೆ ರಹಿತವಾಗಿ ತೆಂಗಿನ ಕಾಯಿಯನ್ನು ಅರ್ಪಿಸಲಾಯಿತು. ರಾಶಿ ಹಾಕಿರುವ ತೆಂಗಿನ ಕಾಯಿಗಳನ್ನು ಒಬ್ಬನೇ ವ್ಯಕ್ತಿ ತನ್ನ ಎರಡು ಕೈಗಳಿಂದ ಕಲ್ಲಿಗೆ ಎಸೆದು ಅರ್ಪಿಸಿದರು. ತಡೆ ರಹಿತವಾಗಿ ಒಡೆಯುವುದು, ಇದಕ್ಕಾಗಿ ೪೦ ದಿನ ವ್ರತದಲ್ಲಿದ್ದು ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆಯಾಗಿದ್ದು, ಪವಾಡ ಎಂಬAತೆ ಭಕ್ತರು ದೈವಶಕ್ತಿಯ ಪ್ರತಿರೂಪವಾಗಿರುವ ಆಚರಣೆ ಕಣ್ತುಂಬಿಕೊAಡರು. ಈ ಬಾರಿ ೩ ಗಂಟೆ ೧೦ ನಿಮಿಷ ಅವಧಿಯಲ್ಲಿ ೧೨ ಸಾವಿರ ತೆಂಗಿನಕಾಯಿ ಒಡೆದು
ದೈವ ಶಕ್ತಿಯ ರೂಪವನ್ನು ಕಾಣುವಂತಾಯಿತು. ಪ್ರತೀ ನಿಮಿಷಕ್ಕೆ ೭೦ ತೆಂಗಿನಕಾಯಿ ಒಡೆಯಲಾಯಿತು. ದೇವಸ್ಥಾನದ
(ಮೊದಲ ಪುಟದಿಂದ) ÀÄನವಿಯಂತೆ ಜಿಲ್ಲೆಯ ಭಕ್ತರಿಂದ ಬಾರಿ ೧೨ ಸಾವಿರ ತೆಂಗಿನಕಾಯಿ ಸಂಗ್ರಹಿಸಲು ನೆರವಾಯಿತು.
ಆನೆ ಮೇಲೆ ದೇವಮೂರ್ತಿ : ಮಂಗಳವಾರ ಪತ್ತೂಟ್ ಆಚರಣೆ ನಡೆಯಿತು. ಮಧ್ಯಾಹ್ನ ೨.೩೦ ಗಂಟೆ ಸುಮಾರಿಗೆ ದೇವರ ಮೂರ್ತಿಯನ್ನು ಹೊರ ತಂದು ಆನೆಯ ಮೇಲೆ ಇಟ್ಟು ಪ್ರದಕ್ಷಿಣೆ ಮಾಡಲಾಯಿತು. ಕೊಡವರು ಕುಪ್ಯಚೇಲೆ, ಮಂಡೆ ತುಣಿ ತೊಟ್ಟು ದುಡಿಕೊಟ್ಟ್ ಮೂಲಕ ದೇವರನ್ನು ಬರ ಮಾಡಿಕೊಂಡರು. ತನ್ನದೇ ಹಾಡಿನಲ್ಲಿ ದೇವರ ಎದುರು ನಿಂತು ಕೊಡಗಿನ ದೇವರುಗಳ ಮೂಲ ಸ್ಥಾನವಾಗಿರುವ ಬೈತೂರಚ್ಚನನ್ನು ಪ್ರಾರ್ಥಿಸಿದರು. ಬೆಳಿಗ್ಗೆ ದೇವರ ಅಕ್ಕಿ ಪಾಯಸ ಪ್ರಸಾದ ಭಕ್ತರು ಸ್ವೀಕರಿಸಿದರು. ವಿಶೇಷ ಪೂಜೆ ನಡೆಯಿತು. ಮಧ್ಯಾಹ್ನ ಸಾವಿರಾರು ಭಕ್ತರು ಅನ್ನದಾನ ಸ್ವೀಕರಿಸಿದರು.
ಮೈಮೇಲೆ ಬರುವವರು ದೇವರ ಗೆಜ್ಜೆ ತಂಡ್, ಕೋಲ್, ಕಡತಲೆ ಸ್ಥಾನ ಎದುರು ಇಟ್ಟು ಪೂಜಿಸಿದರು.
ಭಕ್ತ ಸಾಗರ : ಕೊರೊನಾದಿಂದಾಗಿ ದೇವಸ್ಥಾನ ಪ್ರವೇಶ ನಿರ್ಬಂಧ ತೆರವುಗೊಂಡ ಹಿನ್ನೆಲೆ, ಕೊಡಗು ಜಿಲ್ಲೆಯ ಭಕ್ತರು ಹೆಚ್ಚು ಕಂಡು ಬಂದರು. ಮಂಗಳವಾರ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿದರು. ಕೊಡವ ಸಾಂಪ್ರಾದಾಯಿಕ ಸೀರೆ, ಕುಪ್ಯಚೇಲೆ, ಮಂಡೆತುಣಿ ತೊಟ್ಟು ದೇವರ ಪ್ರಾರ್ಥನೆ ನಡೆಸಿದರು. ಮಧ್ಯಾಹ್ನದ ಹೊತ್ತಿಗೆ ಸಾವಿರಾರು ಭಕ್ತರು ಸೇರಿ ದೇವರ ಪ್ರದಕ್ಷಿಣೆ ಸಂದರ್ಭ ಬೈತೂರಚ್ಚನ ನೆನೆದು ಪುನೀತರಾದರು. ಹೆಚ್ಚು ಸಂಖ್ಯೆಯಲ್ಲಿ ಕೊಡಗಿನ ಭಕ್ತರ ಆಗಮನ ವಿಶೇಷತೆ ಮೂಡಿಸಿತು.
ಶ್ರೀ ವಯತ್ತೂರ್ ಕಲಿಯಾರ್ ದೇವಸ್ಥಾನ ಸಮಿತಿ ಮುಖ್ಯಸ್ಥ ಒ.ವಿ. ರಾಜನ್, ಟ್ರಸ್ಟಿ ಹರಿಚಂದ್ರನ್ ನಂಬಿಯಾರ್, ಪುಗ್ಗೇರ ಪೊನ್ನಪ್ಪ, ಮಾಳೇಟಿರ ರತ್ನ ಸುಬ್ಬಯ್ಯ, ಹರಿದಾಸ್ ಪಳಿಯತ್ ಇದ್ದರು.