ಮಡಿಕೇರಿ, ಜ. ೨೩: ಭಾರತೀಯ ವಾಯು ಸೇನೆಯಲ್ಲಿ ಜಿಲ್ಲೆಯ ಯುವಕ ಮಾಳೇಟಿರ ಪ್ರಣವ್ ತಿಮ್ಮಯ್ಯ ಅವರು ಫ್ಲೆöÊಯಿಂಗ್ ಆಫೀಸರ್ ಆಗಿ ಹೊರಹೊಮ್ಮಿದ್ದಾರೆ.
(ಮೊದಲ ಪುಟದಿಂದ) ಮೂಲತಃ ಕೆದಮುಳ್ಳೂರಿನವರಾದ ಗೊಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಮಾಳೇಟಿರ ಬಿ. ಕಾವೇರಪ್ಪ ಹಾಗೂ ಲಯನ್ಸ್ ಶಾಲಾ ಶಿಕ್ಷಕಿ ಮಮತಾ (ತಾಮನೆ ಪಟ್ಟಮಾಡ) ದಂಪತಿಯ ಪುತ್ರ ಪ್ರಣವ್ ತಿಮ್ಮಯ್ಯ ೨೦೨೧ರಲ್ಲಿ ಏರ್ಫೋರ್ಸ್ ಎಂಟ್ರೆನ್ಸ್ ಎಕ್ಸಾಂನಲ್ಲಿ ರಾಜ್ಯದ ಮೂವರ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದರು. ಬಳಿಕ ಹೈದರಾಬಾದ್ನ ದುಂಡಿಗಲ್ ಏರ್ಫೋರ್ಸ್ ಅಕಾಡೆಮಿಯಲ್ಲಿ ಮಿಲಿಟರಿ ತರಬೇತಿ ಹಾಗೂ ಬೆಂಗಳೂರಿನ ಎ.ಎಫ್.ಟಿ.ಸಿ.ಯಲ್ಲಿ ತಾಂತ್ರಿಕ ತರಬೇತಿ ಬಳಿಕ ಇದೀಗ ತಾ. ೨೧ರಂದು ಬೆಂಗಳೂರಿನಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ನಲ್ಲಿ ಫ್ಲೆöÊಯಿಂಗ್ ಆಫೀಸರ್ ಆಗಿ ಹೊರಹೊಮ್ಮಿದ್ದು ಪಂಜಾಬ್ನ ಬಾಟಿಂಡದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ.