ಮಡಿಕೇರಿ, ಜ. ೨೩: ಜಿಂಕೆಯೊAದು ಕಾಫಿ ತೋಟವೊಂದರಿAದ ರಸ್ತೆಗೆ ಜಿಗಿದ ಸಂದರ್ಭ ಖಾಸಗಿ ಬಸ್‌ಗೆ ಅಪ್ಪಳಿಸಿ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಕುಟ್ಟ ಸನಿಹದ ನರಿಕಡಿ ಎಂಬಲ್ಲಿ ಇಂದು ಅಪರಾಹ್ನ ೩ ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಕಾಫಿ ತೋಟವೊಂದರಿAದ ಓಡಿಬಂದ ಜಿಂಕೆ ರಸ್ತೆಗೆ ಹಾರಿದ ಸಂದರ್ಭ ಅದೇ ಸ್ಥಳದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನ ಮುಂಭಾಗದ ಗ್ಲಾಸ್‌ಗೆ ಅಪ್ಪಳಿಸಿದೆ. ಈ ರಭಸಕ್ಕೆ ಬಸ್‌ನ ಗಾಜುಗಳು ಪುಡಿ ಪುಡಿಯಾಗಿದ್ದು ಜಿಂಕೆ ಸ್ಥಳದಲ್ಲೇ ಸಾವಿಗೀಡಾಗಿದೆ. ಘಟನಾ ಸ್ಥಳಕ್ಕೆ ಪೊನ್ನಂಪೇಟೆ ವಲಯ ಅರಣ್ಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ
(ಮೊದಲ ಪುಟದಿಂದ) ದಾಖಲಿಸಿಕೊಳ್ಳಲಾಗಿದ್ದು ನಿಯಮದಂತೆ ಕ್ರಮ ಜರುಗಿಸಲಾಗುವುದು ಎಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸ್ಥಳದಲ್ಲಿ ನಿಂತಿದ್ದ ಬಸ್ ಅನ್ನು ಗಮನಿಸಿದರೆ ಭಾರಿ ಅವಘಡ ಸಂಭವಿಸುವAತೆ ಭಾಸವಾಗುತ್ತಿದ್ದುದಾಗಿ ಸ್ಥಳೀಯರು ಹೇಳಿದ್ದಾರೆ.