(ಪುತ್ತರಿರ ಕರುಣ್ ಕಾಳಯ್ಯ)

ಚೆಟ್ಟಳ್ಳಿ, ಜ. ೨೩: ಕಾಫಿ ಗಿಡಗಳ ಎಲೆಯ ಕೆಳಭಾಗದಲ್ಲಿ ಎಳೆಚಿಗುರಲ್ಲಿ ಕಾಯಿಯ ತೊಟ್ಟಿನ ಸನಿಹದಲ್ಲಿ ಮುದ್ದೆಯಾಗಿ ಕುಳಿತು ರಸ ಹೀರುತ್ತಾ ಗಿಡಗಳ ಬೆಳೆವಣಿಗೆಯನ್ನು ಕುಂಠಿತಗೊಳಿಸುವ ಬೂದಿ ಬಣ್ಣದಂತೆ ಕಾಣುವ ಮಿಲಿಬಗ್ ಕೀಟಗಳನ್ನು ತಿನ್ನುವ ಲೆಪೊಟೊಮ್ಯಾಸ್ಟಿಕ್ಸ್ ಡೆಕ್ಟೊಲೋಪಿ ಎಂಬ ಸಣ್ಣಗಿನ ಪರವಾಲಂಬಿ ಕೀಟವೊಂದರ ಅಭಿವೃದ್ಧಿಯನ್ನು ಚೆಟ್ಟಳ್ಳಿ ಕಾಫಿ ಉಪ ಸಂಶೋದನಾ ಕೇಂದ್ರ ಮಾಡಿದೆ.

ಬಿಳಿ ಉಣ್ಣೆ ಅಥವಾ ಹಿಟ್ಟು ತಿಗಣೆ ಎಂದು ಕರೆಯಲ್ಪಡುವ ಪಸುಡೊಕೋಕ್ಸಿಡೇ ಎಂಬ ಜಾತಿಗೆ ಸೇರಿದ ಮಿಲಿಬಗ್ ಕೀಟ ಇದಾಗಿದ್ದು ರೋಬಸ್ಟಾ ಹಾಗೂ ಅರೇಬಿಕಾ ಗಿಡಗಳನ್ನು ಕಾಡುವ

(ಮೊದಲ ಪುಟದಿಂದ) ಕಾಂಡ ಕೊರಕ (ಬೋರರ್), ಬೆರಿಬೋರರ್, ರೆಕ್ಕೆಬೋರರ್, ಎಲೆಚುಕ್ಕಿ ರೋಗ ಹೀಗೆ ಹಲವು ಖಾಯಿಲೆÀಗಳ ಜೊತೆಗೆ ಮಿಲಿಬಗ್ ಕೀಟವು ಒಂದಾಗಿದೆ. ಬೇಸಿಗೆಯಲ್ಲಿ ಸಂತಾನೋತ್ಪತ್ತಿಯಾಗಿ ಮಳೆಗಾಲ ಬಂತೆAದರೆ ಗಿಡಗಳ ಬೇರಿನಲ್ಲಿ ಸೇರಿ ಬಿಡುತ್ತವೆ. ಕಾಫಿ ಗಿಡಗಳಲ್ಲದೆ ಕರಿಮೆಣಸು ಬಳ್ಳಿ, ಹಣ್ಣಿನ ಗಿಡ, ಮನೆಸುತ್ತಲ ಹೂ ಗಿಡಗಳಲ್ಲೆಲ್ಲ ಹೆಚ್ಚಾಗಿ ಕಂಡುಬರುತ್ತವೆ.

ಪರತAತ್ರ ಕೀಟ ಅಭಿವೃದ್ಧಿಯತ್ತ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರ

ಮಿಲಿಬಗ್ ನಿಯಂAತ್ರಣಕ್ಕೆ ಹಲವು ಸಿಂಪಡಣಾ ಔಷಧಿಗಳಿದ್ದರೂ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ಕೇಂದ್ರದ ಕೀಟ ವಿಭಾಗದಲ್ಲಿ ಸುಮಾರು ೧೫ ವರ್ಷಗಳ ಹಿಂದೆಯೇ ಲೆಪೊ ಟೊಮ್ಯಾಟಿಲ್ ಡೆಟಿಲೋಪಿ ಪರತಂತ್ರ ಕೀಟಗಳನ್ನು ತಂದು ಅಭಿವೃದ್ಧಿಪಡಿಸಲಾಯಿತು. ಹಲವು ವರ್ಷಗಳ ನಂತರ ಕೀಟ ಅಭಿವೃದ್ಧಿಯನ್ನು ಕೈಬಿಡಲಾಯಿತು. ಕೇರಳದ ಕಾಫಿ ಸಂಶೋಧನಾ ಕೇಂದ್ರದಿAದ ೧೦೦೦ ಕೀಟಗಳನ್ನು ತಂದು ೨೦೨೧ರ ಜನವರಿಯಿಂದ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಕೀಟ ವಿಭಾಗದ ಪ್ರಯೋಗಾಲಯದ ಗಾಜು ಹಾಗೂ ಬಲೆಯಲ್ಲಿ ಜೋಡಿಸಿದ ಸಣ್ಣಗಿನ ಹುಳಗಳ ಸಂತಾನೋತ್ಪತ್ತಿ ಪೆಟ್ಟಿಗೆಯೊಳಗೆ ಕುಂಬಳಕಾಯಿ ಹಾಗೂ ಆಲುಗೆಡ್ಡೆ ಇಟ್ಟು ಪ್ರತೀ ಪೆಟ್ಟಿಗೆಯಲ್ಲಿ ೧೦೦ ಕೀಟಗಳನ್ನು ಬೆಳೆಸಲಾಗುತ್ತದೆ. ಕೀಟಗಳ ಸಂಖ್ಯೆ ಅಭಿವೃದ್ಧಿಯಾದಂತೆ ಸಣ್ಣಗಿನ ಪಂಪುಗಳ ಮೂಲಕ ಪೈಪುಗಳಲ್ಲಿ ಎಳೆದು ಪ್ಲಾಸ್ಟಿಕ್ ಡಬ್ಬಕ್ಕೆ ತುಂಬಿ ಬೆಳೆಗಾರರಿಗೆ ನೀಡಲಾಗುತ್ತದೆ.

೧೦೦೦ ಕೀಟಕ್ಕೆ ರೂ. ೨೫೦

ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ಪ್ರತೀ ೧೦೦೦ ಕೀಟಗಳಿಗೆ ರೂ. ೨೫೦ ರಂತೆ ಮಾರಾಟ ಮಾಡಲಾಗುತ್ತಿದೆ. ಸಂಜೆಯ ತಂಪಗಿನ ಸಮಯದಲ್ಲಿ ಮಿಲಿಬಗ್ ಹೆಚ್ಚಾಗಿರುವ ಕಾಫಿ ತೋಟಗಳಲ್ಲಿ ಬಿಡಲಾಗುತ್ತದೆ. ಮಿಲಿಬಗ್ ಕೀಟಗಳನ್ನು ತಿನ್ನುವ ಲೆಪೊಟೊಮ್ಯಾಸ್ಟಿಕ್ಸ್ ಡೆಕ್ಟೊಲೋಪ್ರಿ ಕೀಟಗಳು ಪರಾವಲಂಬಿಯಾದರಿAದ ಮಿಲಿಬಗ್‌ಗಳಿರುವೆಡೆ ಸುಮಾರು ೨೦೦ ರಿಂದ ೩೦೦ ಮೊಟ್ಟೆ ಇಟ್ಟು ಅಭಿವೃದ್ಧಿಪಡಿಸುವ ಮೂಲಕ ಮಿಲಿಬಗ್ಗನ್ನು ತಿನ್ನುತ್ತವೆ. ಮುಂದಿನ ಮೂರು-ನಾಲ್ಕು ವಾರಗಳಲ್ಲಿ ಅಭಿವೃದ್ಧಿಪಡಿಸಿದ ಕೀಟಗಳ ವಿತರಣೆಗೆ ಸಿದ್ಧತೆ ನಡೆಯುತ್ತಿದೆ.

ಬೆಳೆಗಾರರಿಗೆ ಮಾಹಿತಿ

ಕಾಫಿ ಗಿಡಗಳಿಗೆ ಬರುವ ರೋಗಗಳು ನಿಯಂತ್ರಣ ಕ್ರಮ, ಫಸಲು ಅಭಿವೃದ್ಧಿ, ತಳಿ ಅಭಿವೃದ್ಧಿಯ ಜೊತೆಗೆ ಮಿಲಿಬಗ್‌ಗಳ ನಿಯಂತ್ರಣದ ಕ್ರಮಕ್ಕೆ ಈ ಪರತಂತ್ರ ಕೀಟಗಳ ಉಪಯುಕ್ತತೆಯ ಬಗ್ಗೆ ಬೆಳೆಗಾರರಿಗೆ ಚೆಟ್ಟಳ್ಳಿ ಕಾಫಿ ಪ್ರಾಯೋಗಿಕಾ ಉಪ ಕೇಂದ್ರದಲ್ಲಿ ಪ್ರಾತ್ಯಕ್ಷಿಕಾ ಕಾರ್ಯಾಗಾರಗಳ ಜೊತೆಗೆ ನುರಿತ ಕೀಟ ತಜ್ಞರಿಂದ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಕೇಂದ್ರದ ಕೀಟ ತಜ್ಞ ಡಾ. ಮಂಜುನಾಥ್ ರೆಡ್ಡಿ ಅವರ ಮೊಬೈಲ್ ಸಂಖ್ಯೆಯನ್ನು ೯೯೭೨೮೫೪೬೭೯ ಸಂರ್ಕಿಸಬಹುದಾಗಿದೆ.