ಸುಂಟಿಕೊಪ್ಪ, ಜ. ೨೩: ಗರಗಂದೂರಿನಿAದ ಸುಂಟಿಕೊಪ್ಪಕ್ಕೆ ಬರುತ್ತಿದ್ದ ಆಟೋರಿಕ್ಷಾ (ಕೆಎ-೧೨ ಎ-೮೭೮೫) ಸುಂಟಿಕೊಪ್ಪದಿAದ ಗರಗಂದೂರಿಗೆ ತೆರಳುತ್ತಿದ್ದ ಬೈಕ್ (ಕೆಎ-೧೨ ಕೆ-೦೫೩೧) ನಡುವೆ ಪನ್ಯದ ಬಳಿ ಮುಖಾಮುಖಿ ಡಿಕ್ಕಿ ಅಪಘಾತ ಸಂಭವಿಸಿದ್ದು, ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಹಾಗೂ ಮೂವರು ಮಹಿಳೆಯರಿಗೆ ಗಾಯವಾಗಿದ್ದು, ಬೈಕ್ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.