ಮಡಿಕೇರಿ, ಜ. ೨೩: ಪೊನ್ನಂಪೇಟೆ ೬೬/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೧ ನಲ್ಲೂರು ಮತ್ತು ಎಫ್೨ ಬಾಳೆಲೆ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. ೨೪ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕಿರುಗೂರು, ನಲ್ಲೂರು, ಸುಳುಗೋಡು, ಬಾಳೆಲೆ, ನಿಟ್ಟೂರು, ಮಲ್ಲೂರು, ಬೆಸಗೂರು, ರಾಜಪುರ ದೇವನೂರು, ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
*ಎಫ್೬ ಹುದಿಕೇರಿ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. ೨೫ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಬಲ್ಯಮಂಡೂರು, ಚಿಕ್ಕಮಂಡೂರು, ಮುಗಟಗೇರಿ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
*೬೬/೧೧ಕೆವಿ ಮಡಿಕೇರಿ, ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೧೨ ರಾಜಾಸೀಟ್ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ. ೨೪ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೩ ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ, ರೇಸ್‌ಕೋರ್ಸ್ ರಸ್ತೆ, ವಿದ್ಯಾನಗರ, ಹೊಸ ಬಡಾವಣೆ, ಇಂದಿರಾನಗರ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.