ಮಡಿಕೇರಿ, ಜ. ೨೨: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ವಾರ್ಷಿಕ ಮಹಾಸಭೆ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಅಧ್ಯಕ್ಷರು ಆಗಿರುವ ಡಾ. ಸತೀಶ ಅವರ ಅಧ್ಯಕ್ಷತೆಯಲ್ಲಿ ಸ್ಕೌಟ್‌ಗೈಡ್ ಭವನದಲ್ಲಿ ನಡೆಯಿತು.
ಮೊದಲಿಗೆ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು. ನಂತರ ಸಭೆಗೆ ಆಗಮಿಸಿದ ಎಲ್ಲರನ್ನು ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಸ್ವಾಗತಿಸಿದರು. ನಂತರ ಎಲ್ಲರೂ ಸ್ವಪರಿಚಯವನ್ನು ಮಾಡಿದರು. ಅಗಲಿದವರಿಗೆ ಸಂತಾಪ ಸೂಚನೆಯನ್ನು ನಡೆಸಲಾಯಿತು.
ಜಿಮ್ಮಿ ಸಿಕ್ವೇರ ಜಿಲ್ಲಾ ಸ್ಕೌಟ್ ಆಯುಕ್ತರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ ಸಭೆ ಎಂದರೆ ಏನು ಯಾರು ಸದಸ್ಯರು ಇರುತ್ತಾರೆ. ಸಭೆಗೆ ಯಾವ ಸದಸ್ಯರು ಆಗಮಿಸಬೇಕು ಎಂಬುದರ ಬಗ್ಗೆ ಪೂರ್ಣ ವಿವರಣೆಯನ್ನು ನೀಡಿದರು. ಕಳೆದ ಸಭೆಯ ನಡಾವಳಿಯನ್ನು ಕಾರ್ಯದರ್ಶಿ ಎಂ.ಎA. ವಸಂತಿ ಸಭೆಯಲ್ಲಿ ಮಂಡಿಸಿದರು. ಜಿಲ್ಲಾ ಸಂಘಟಕಿ ಸಿ. ದಮಯಂತಿ ಕಳೆದ ಸಾಲಿನಲ್ಲಿ ನಡೆಸಿದ ವಾರ್ಷಿಕ ಕಾರ್ಯ ಕ್ರಮಗಳ ವರದಿಯನ್ನು ಓದಿದರು. ೨೦೨೧ನೇ ಸಾಲಿನ ಲೆಕ್ಕಪತ್ರವನ್ನು ಖಜಾಂಚಿ ಪುಷ್ಪವೇಣಿ ಸಭೆಯಲ್ಲಿ ಮಂಡಿಸಿದರು
ಇದೇ ಸಂದರ್ಭ ಅಂತರ ರಾಷ್ಟಿçÃಯ ಸಾಂಸ್ಕೃತಿಕ ಜಾಂಬೂರಿಗೆ ಸಹಾಯ ಮಾಡಿದ ಕರ್ನಾಟಕ ರಾಜ್ಯ ಸಾರಿಗೆ ನಿಗಮ ಘಟಕದ ವ್ಯವಸ್ಥಾಪಕಿ ಗೀತಾ ಅವರನ್ನು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಅಧೀಕ್ಷಕರಾದ ಡಾ. ಸದಾಶಿವ ಪಲ್ಲೇದ್ ಅವರನ್ನು ಸನ್ಮಾನಿಸ ಲಾಯಿತು. ಸನ್ಮಾನ ಸ್ವೀಕರಿಸಿದ ಪಲ್ಲೇದ್ ಅವರು ಮಾತನಾಡಿ, ಈ ಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣನಡತೆ ಶಿಸ್ತು ಸಂಯಮ ಎಲ್ಲವೂ ಬರುತ್ತದೆ ಎಂದು ನುಡಿದರು ಇದೇ ಸಂದರ್ಭ ಕ್ಲಬ್ ವಿಭಾಗದಲ್ಲಿ ಉನ್ನತ ತರಬೇತಿ ಪಡೆದ ರತಿ ಕುಮಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಡಗದಾಳು ಮತ್ತು ಗೈಡ್ ವಿಭಾಗದಲ್ಲಿ ಉನ್ನತ ತರಬೇತಿ ಪಡೆದ ಬಿಬಿ ಜಾಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೆನ್ನನಕೋಟೆ ಇವರಿಗೆ ರಾಷ್ಟಿçÃಯ ಸಂಸ್ಥೆಯಿAದ ಬಂದಿರುವ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.
ಮೈಥಲಿರಾವ್ ಅವರು ಅಂತರ ರಾಷ್ಟಿçÃಯ ಸಾಂಸ್ಕೃತಿಕ ಜಾಂಬೂರಿ ಯಲ್ಲಿ ಸಬ್ ಕ್ಯಾಂಪ್ ಚೀಫ್ ಆಗಿ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ರಾಜ್ಯ ಸಂಸ್ಥೆಯಿAದ ನೀಡಿದ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿಗಳು ಇದೇ ಸಂದರ್ಭ ವಿತರಿಸಿದರು. ಗೈಡ್ ಆಯುಕ್ತೆ ಬಿ.ಬಿ. ಸಾವಿತ್ರಿ ಮಾತನಾಡಿ, ಸ್ಕೌಟ್ಸ್ ಗೈಡ್ಸ್ ರವರು ಉತ್ತಮ ಸೇವೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಎಸ್‌ಎಸ್ ಎಲ್‌ಸಿ ಪರೀಕ್ಷೆಯ ಸಮಯದಲ್ಲಿ ಇವರನ್ನು ಮೇಲ್ವಿಚಾರಕರಾಗಿ ತೆಗೆದು ಕೊಂಡರೆ ಉತ್ತಮವೆಂದು ತಿಳಿಸಿದರು. ಬಿ.ಬಿ. ಜಾಜಿ ಅಂತರರಾಷ್ಟಿçÃಯ ಸಾಂಸ್ಕೃತಿಯ ಜಾಂಬೂರಿಯ ಬಗ್ಗೆ ಅವರ ಅನುಭವಗಳನ್ನು ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ದೇಶಿಯ ಆಟಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಂಡರೆ ಇನ್ನೂ ಉತ್ತಮವಾಗುತ್ತದೆ ಎಂದು ನುಡಿದರು. ಇದು ಒಂದು ಉತ್ತಮ ಸಲಹೆ ಯಾಗಿದ್ದು ಇದನ್ನು ರಾಜ್ಯ ಸಂಸ್ಥೆಯ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಈ ತರಹದ ಒಂದು ಕಾರ್ಯಕ್ರಮ ವನ್ನು ಮಾಡುತ್ತೇವೆ ಎಂದು ಜಿಮ್ಮಿ ಸಿಕ್ವೇರಾ ಅವರು ನುಡಿದರು. ಸಭೆಯಲ್ಲಿ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷರಾದ ರಾಣಿಮಾಚಯ್ಯ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ , ಸ್ಥಾನಿಕ ಆಯುಕ್ತರಾದ ಹೆಚ್.ಆರ್. ಮುತ್ತಪ್ಪ, ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ಭಾಗವಹಿಸಿದ್ದರು.