ಮೂರ್ನಾಡು, ಜ. ೨೨: ಮೂರ್ನಾಡು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡುವಿನ ಸಮುದಾಯ ಭವನದಲ್ಲಿ ನಡೆಯಿತು.
ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಚಿವ ಬಿ.ಎ. ಜೀವಿಜಯ, ಮಡಿಕೇರಿ ಕ್ಷೇತ್ರದ ಇನ್ನೊಬ್ಬ ಆಕಾಂಕ್ಷಿ ಡಾ. ಮಂಥರ್‌ಗೌಡ, ಮತ್ತೋರ್ವ ಆಕಾಂಕ್ಷಿ ಹರಪನಹಳ್ಳಿ ರವೀಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಮಾತನಾಡಿದರು.
ಈ ಸಂದರ್ಭ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಜಯೇಂದ್ರ ನೇತೃತ್ವದಲ್ಲಿ ಬ್ಲಾಕ್ ಎಸ್.ಸಿ. ಘಟಕದ ಪದಾಧಿಕಾರಿಗಳು ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ ಮಾಡಲಾಯಿತು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರ ಮೈನ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಗೋವಿಂದರಾಜ್ ದಾಸ್, ಡಿಸಿಸಿ ಪ್ರಮುಖರಾದ ಪಾಪು ಸಣ್ಣಯ್ಯ, ಮಂದ್ರೀರ ಮೋಹನ್ ದಾಸ್, ಬ್ಲಾಕ್ ಪ್ರಮುಖರಾದ ಯಶ್ ದೋಲ್ಪಾಡಿ, ರವಿಗೌಡ, ಶಾಫಿ ಕೊಟ್ಟಮುಡಿ, ಮೂರ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಕೇಶವ, ಪ್ರಮುಖರಾದ ಶಿವಕುಮಾರ್, ಧನಂಜಯ, ಮಹಮದ್ ಆಲಿ, ರಘು ಭೈರ, ಮೀನಾಕ್ಷಿ ಕೇಶವ, ಲಿಲ್ಲಿ ಗೌಡ, ಸಾದಿಕ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.