*ಗೋಣಿಕೊಪ್ಪ, ಜ. ೨೦: ಹೊರಜಿಲ್ಲೆಯವರು ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಪಡೆದು ಕೊಳ್ಳುವುದರಿಂದ ಬಹುತೇಕ ಕಾಮಗಾರಿಗಳು ವಿಳಂಬವಾಗುವುದ ರೊಂದಿಗೆ ಕಳಪೆ ಕಾಮಗಾರಿಯ ಆರೋಪ ಹೊತ್ತುಕೊಳ್ಳುತ್ತಿದೆ ಎಂದು ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.
ಕಾವೇರಿ ಜಲಾನಯನ ಅಭಿವೃದ್ದಿ ನಿಗಮದ ೯೦ ಲಕ್ಷ ಅನುದಾನದಲ್ಲಿ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಕಾರೆಕಂಡಿ ಗಿರಿಜನ ಹಾಡಿಯ ಕಾಂಕ್ರಿಟ್ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ಕೋಟಿ ಅನುದಾನ ದೊರೆತರೂ, ಕೆಲವು ಗುತ್ತಿಗೆದಾರರು ಕಾಮಗಾರಿಯನ್ನು ವಿಳಂಬ ಮಾಡುತ್ತಿರುವುದರಿಂದ ನಿರೀಕ್ಷಿಸಿದ ಸಮಯದಲ್ಲಿ ಕೆಲಸಗಳು ಸುಗಮವಾಗುತ್ತಿಲ್ಲ. ಸ್ಥಳೀಯ ಗುತ್ತಿಗೆದಾರರು ಕಾಮಗಾರಿಗಳ ಗುತ್ತಿಗೆ ಪಡೆದುಕೊಂಡಾಗ ಸ್ಥಳೀಯ ಗ್ರಾಮಸ್ಥರ ಪರಿಚಯವಿರುವ ಕಾರಣದಿಂದ ಶೀಘ್ರಗತಿಯಲ್ಲಿ ಕೆಲಸ ಕಾರ್ಯಗಳು ನೆರವೇರಬಲ್ಲದು ಎಂದು ಹೇಳಿದರು.
ಗಿರಿಜನರನ್ನು ಮುಖ್ಯವಾಹಿನಿಗೆ ಕರೆತರುವ ಮೂಲ ಉದ್ದೇಶದೊಂದಿಗೆ ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅವರ ಹಾಡಿಗಳತ್ತ ಕೊಂಡ್ಯೊಯ್ಯುತ್ತಿದೆ. ಈ ನಿಟ್ಟಿನಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡಲಾಗುತ್ತಿದೆ. ಆದರೆ, ವಿಭಿನ್ನ ಸಂಸ್ಕöÈತಿಯನ್ನು ಹೊಂದಿರುವ ಗಿರಿಜನರು ಮತಾಂತರದ ಆಮಿಷಗಳಿಗೆ ಬಲಿಯಾಗಿ ತಮ್ಮ ಜೀವನದ ಪಾರಂಪರಿಕ ವ್ಯವಸ್ಥೆಯಿಂದ ಹೊರಬರುತ್ತಿದ್ದಾರೆ ಎಂಬುದು ವಿಷಾದದ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಬುಡಕಟ್ಟು ಸಮುದಾಯದವರು ಶಿಕ್ಷಣವಂತರಾದಾಗ ಸಮಾಜದಲ್ಲಿನ ಹಲವು ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವ ಸಾಮರ್ಥ್ಯ ಹೊಂದಬಹುದು. ಸರ್ಕಾರದ ಹಲವು ಅಧಿಕಾರದ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮುದಾಯವನ್ನು ರಾಷ್ಟಿçÃಯ ಮಟ್ಟದಲ್ಲಿ ಗುರುತಿಸಲು ಸಾಧ್ಯವಾಗಬಲ್ಲದು ಎಂದು ಸಲಹೆ ನೀಡಿದರು.
ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ವಿಜಯ, ಸದಸ್ಯರುಗಳಾದ ಎನ್.ಎನ್. ಅನೂಪ್‌ಕುಮಾರ್, ಆಶಾ, ಶಂಕರ, ಶ್ಯಾಮಲ, ಸುಬ್ರು, ಶೇಖರ, ಪೊನ್ನಿ, ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪುö್ಪಡಿರ ರಾಮಕೃಷ್ಣ, ಸದಸ್ಯರುಗಳಾದ ಗೋವಿಂದ, ಶಕ್ತಿ ಕೇಂದ್ರ ಪ್ರಮುಖ್ ಶಿವುಅಪ್ಪಿ, ಪ್ರಮುಖರುಗಳಾದ ಎಂ.ಎನ್. ಕೃಷ್ಣ, ಪಾಲೆಂಗಡ ಮನುನಂಜಪ್ಪ, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ನವೀನ್, ಗುತ್ತಿಗೆದಾರ ನಾಮೇರ ನವೀನ್, ದಿಲೀಪ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಪಂಚಾಯಿತಿ ಅಭಿವೃದ್ಧ ಅಧಿಕಾರಿ ಮಮತಾ ಜಗದೀಶ್, ಹಾಡಿ ನಿವಾಸಿಗಳು ಹಾಗೂ ಪಕ್ಷದ ಪ್ರಮುಖರು ಹಾಜರಿದ್ದರು.