ಮಡಿಕೇರಿ, ಜ. ೨೦: ತಾ. ೨೨ ರಿಂದ ೨೫ ರವರೆಗೆ ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಹಬ್ಬ ನಡೆಯಲಿದ್ದು, ಕ್ರೀಡಾ ಪ್ರೇಮಿಗಳು ಈ ಪಂದ್ಯಾವಳಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಕುಶಾಲನಗರದ ಸಹರ ಕ್ರಿಕೆಟ್ ಕ್ಲಬ್ ವತಿಯಿಂದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ.

ಕೊಡಗು ಜಿಲ್ಲೆಯ ಬಹುತೇಕ ಕ್ರಿಕೆಟ್ ಆಟಗಾರರು ವಿವಿಧ ತಂಡಗಳಲ್ಲಿ ಆಟವಾಡುತ್ತಿರುವುದು ವಿಶೇಷ.

ಒಟ್ಟು ಹತ್ತು ತಂಡಗಳು ಆಡಲಿದ್ದು, ಎಲ್ಲಾ ತಂಡಗಳ ಮಾಲೀಕರು ಐಪಿಎಲ್‌ನಲ್ಲಿ ಆಡುತ್ತಿರುವ ಹೆಸರಿನ ತಂಡಗಳನ್ನು ಬಿಡ್ಡ್ ಮೂಲಕ ಖರೀದಿಸಿದ್ದಾರೆ.

ಇದೆ.

ಸಹರ ಕ್ರಿಕೆಟ್ ಕ್ಲಬ್ ಈ ಬಾರಿ ಕುಶಾಲನಗರದಲ್ಲಿ ನಡೆಯಲಿರುವ ಐಪಿಎಲ್ ಮಾದರಿಯ ಪಂದ್ಯದಲ್ಲಿ ದೇಶದ ಯಾವುದೇ ರಾಜ್ಯದಿಂದ ಮೂವರು ಅತಿಥಿ ಆಟಗಾರರನ್ನು ಎಲ್ಲಾ ತಂಡದಲ್ಲಿ ಆಡಿಸಲು ಅವಕಾಶ ಮಾಡಿಕೊಡಲಾಗಿದೆ. ಒಂದು ತಂಡದಲ್ಲಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯದ ಆಟಗಾರರೂ ಭಾಗವಹಿಸಬಹುದಾಗಿದೆ. ಆದರೆ, ಒಂದು ತಂಡದಲ್ಲಿ ಇಬ್ಬರಿಗೆ ಮಾತ್ರ ಆಡಲು ಅವಕಾಶವಿದೆ.

ಜಿಲ್ಲೆಯಿಂದ ಒಟ್ಟು ೧೫೦ಕ್ಕೂ ಹೆಚ್ಚು ಆಟಗಾರರು ಬಿಡ್ಡಿಂಗ್ ಮೂಲಕ ಆಯ್ಕೆಯಾಗಿದ್ದಾರೆ.

ಇಂದು ಉದ್ಘಾಟನೆ

ಪಂದ್ಯಾವಳಿಗೆ ತಾ. ೨೧ರಂದು (ಇಂದು) ಚಾಲನೆ ದೊರಕಲಿದೆ. ನೂತನವಾಗಿ ನಿರ್ಮಿಸಿರುವ ಮೈದಾನ ಉದ್ಘಾಟನೆಯ ನಂತರ, ಕುಶಾಲನಗರ ಪತ್ರಕರ್ತರ ಸಂಘ, ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ಐಪಿಎಲ್ ಸೀಜನ್-೨ ಎಲ್ಲಾ ಮಾಲೀಕರು ಸೇರಿ ಮಾಡಿರುವ ತಂಡ, ವಕೀಲರು ಹಾಗೂ ರಾಜಕಾರಣಿಗಳ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ತಾ. ೨೨ ರಂದು ಐಪಿಎಲ್ ಸೀಜನ್-೨ ಹತ್ತು ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ. ಫೈನಲ್ ಪಂದ್ಯವು ತಾ. ೨೫ ರಂದು ನಡೆಯಲಿದೆ.

ಕುಶಾಲನಗರದಲ್ಲಿ ನಡೆಯಲಿರುವ ಸಹರ ಕ್ರಿಕೆಟ್ ಕ್ಲಬ್ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಫ್ರಾಂಚೈಸಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಆಕರ್ಷಕವಾದ ಟ್ರೋಫಿಯಲ್ಲಿ ೯೧೬ ಚಿನ್ನದಿಂದ ಐಪಿಎಲ್ ಎಂದು ಮುದ್ರಿತವಾದ ಟ್ರೋಫಿ ನೀಡಲಾಗುತ್ತದೆ.

ರೂ.೫೦ ಸಾವಿರ ದ್ವಿತೀಯ ಬಹುಮಾನ ಮತ್ತು ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಗಳಿಗೆ ೨೫ ಸಾವಿರ ನಗದು ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ೧೫ ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುತ್ತಿದೆ.

-ಇಸ್ಮಾಯಿಲ್ ಕಂಡಕೆರೆ.