ಮಡಿಕೇರಿ, ಜ. ೧೬: ತಾ. ೧೫ ರಂದು ಪ್ರಕಟವಾದ ‘ಕಾಫಿ ವ್ಯಾಪಾರಿಗೆ ವಂಚನೆ : ದೂರು ದಾಖಲು’ ಎಂಬ ಸುದ್ದಿಯಲ್ಲಿ ಆರೋಪಿಯಾಗಿರುವ ತುಳಸಿ ರೈ ಎಂಬಾತ ಬಿಬಿಟಿಸಿಎಲ್ ತೋಟದ ಭದ್ರತಾ ಸಿಬ್ಬಂದಿ ಎಂದು ಪೊಲೀಸ್ ಮೊಕದ್ದಮೆಯಲ್ಲಿ ದಾಖಲಾಗಿರುವಂತೆ ಪ್ರಕಟಿಸಲಾಗಿದೆ.
ಆದರೆ, ಆತ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ಮೂಲಕ ೬ ತಿಂಗಳ ಹಿಂದೆ ಬಿಬಿಟಿಸಿಎಲ್ ತೋಟದಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದು, ಪ್ರಸ್ತುತ ಆತ ತೋಟದಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ಬಿಬಿಟಿಎಸಿಎಲ್ ತೋಟದ ವ್ಯವಸ್ಥಾಪಕರು ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.