ಚೆಯ್ಯಂಡಾಣೆ, ಜ. ೧೬. ಎಡಪಾಲ ಕಿಕ್ಕರೆಯ ನೂರುಲ್ ಮದೀನಾ ಜುಮಾ ಮಸೀದಿಯ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ ಮಾರ್ಹೂಂ ಶೈಖುನಾ ಮಹಮೂದ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ ತಾ.೧೭ ರಂದು (ಇಂದು) ನಡೆಯಲಿದೆ. ಸಂಜೆ ಧ್ವಜಾರೋಹಣವನ್ನು ಸ್ವಲಾತ್ ಸಮಿತಿಯ ಅಧ್ಯಕ್ಷರಾದ ಬಷೀರ್ ಕೆ.ವೈ. ನೆರವೇರಿಸಲಿದ್ದಾರೆ.

ನಂತರ ಅಂಡತ್ ಮಾನಿ ದರ್ಗಾದಲ್ಲಿ ಝಿಯಾರತ್ ನೇತೃತ್ವವನ್ನು ಕಿಕ್ಕರೆ ಮಸೀದಿ ಖತೀಬ್ ಶಂಸುದ್ದೀನ್ ಅಮ್ಜದಿ ವಹಿಸಲಿದ್ದಾರೆ. ಮಗ್ರಿಬ್ ನಮಾಜ್ ನಂತರ ಖಮರುದ್ದಿನ್ ಅನ್ವಾರಿ ಕೊಡಗರಹಳ್ಳಿ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ.

ನಂತರ ಕಿಕ್ಕರೆ ಜಮಾಅತ್ ಅಧ್ಯಕ್ಷರಾದ ಉಸ್ಮಾನ್ ಕೆ.ಎಂ. ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಭಾಷಣಕಾರರಾಗಿ ಮುಸ್ತಫಾ ಸಖಾಫಿ ತೆನ್ನಲ ಪಾಲ್ಗೊಳ್ಳಲಿದ್ದಾರೆ. ಸ್ವಲಾತ್ ಹಾಗೂ ದುಆ ನೇತೃತ್ವವನ್ನು ಸಯ್ಯದ್ ಸೀದಿ ಅಲ್ ಹೈದ್ರೂಸಿ ಅಲ್ ಅಹಸನಿ ತಂಗಳ್ ವಹಿಸಲಿದ್ದಾರೆ.