ವೀರಾಜಪೇಟೆ, ಜ. ೧೬: ಕಾಫಿ ತೋಟವೊಂದರಲ್ಲಿ ಕಾಫಿ ಕುಯ್ಯುವ ಕೆಲಸಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಶ್ರೀಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಟಿ.ಶೆಟ್ಟಿಗೇರಿ ತಾವಳಗೇರಿ ಗ್ರಾಮದ ಕಾಫಿ ಬೆಳೆಗಾರ ಎಂ.ಎಸ್. ಸಂಜು ಎಂಬವರ ಕಾಫಿ ತೋಟದಲ್ಲಿ ಕೆಲವು ದಿನಗಳ ಹಿಂದೆ ಕಾಫಿ ಕುಯ್ಯುವ ಕೆಲಸಕ್ಕಾಗಿ ವ್ಯಕ್ತಿಯೊಬ್ಬ ಆಗಮಿಸಿದ್ದಾನೆ. ತೋಟದ ಮಾಲೀಕರ ಬಳಿಯಲ್ಲಿ ಹೆಸರು ಅಜಿ ಎಂದು ಪಾಕಂ ಗ್ರಾಮ ಮಾನಂದವಾಡಿ, ಕೇರಳ ರಾಜ್ಯ ಎಂದು ವಿಳಾಸವನ್ನು ನೀಡಿದ್ದಾನೆ. ಮಾಲೀಕರ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದು ಕೆಲಸಕ್ಕೆ ತೆರಳುತಿದ್ದ. ಎಂದಿನAತೆ ಕೆಲಸಕ್ಕೆ ಹಾಜರಾಗುವ ಕಾರ್ಮಿಕ ನಿನ್ನೆ ಗೈರುಹಾಜರಿಯಾಗಿದ್ದ. ತೋಟದ ಮಾಲೀಕರಾದ ಸಂಜು ಅವರು ಲೈನ್‌ಮನೆಗೆ ತೆರಳಿ ನೋಡಿದಾಗ ಮನೆಯ ಒಳಗೆ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ. ಕಾಫಿ ತೋಟದ ಮಾಲೀಕÀ ಸಂಜು ಅವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರ ಇದ್ದಲ್ಲಿ ಸನಿಹದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.