ಸಿದ್ದಾಪುರ, ಜ. ೧೬: ಆಕಸ್ಮಿಕವಾಗಿ ಕೆರೆಯಲ್ಲಿ ಬಿದ್ದು ವೃದ್ಧ ಸಾವನ್ನಪ್ಪಿರುವ ಘಟನೆ ತಾ. ೧೫ರ ಸಂಜೆ ಹಾಲುಗುಂದ ಗ್ರಾಮದಲ್ಲಿ ನಡೆದಿದೆ.

ಹಾಲುಗುಂದ ಗ್ರಾಮದ ನಿವಾಸಿಯಾಗಿರುವ ಮಾಚೆಟ್ಟೀರ ಉತ್ತಯ್ಯ (೯೧) ಎಂಬವರು ಕೈ ಕಾಲು ತೊಳೆಯಲು ಕೆರೆಯ ಬಳಿ ಹೋದ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.