*ಗೋಣಿಕೊಪ್ಪ, ಜ. ೧೪: ಬಲವಂತವಾಗಿ ಮತಾಂತರಗೊAಡು ಸರ್ಕಾರದ ಸೌಲಭ್ಯಗಳಿಂದ ಗಿರಿಜನರು ವಂಚಿತರಾಗಬಾರದು ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
ಗುರುವಾರ ತಿತಿಮತಿ ಬಾಲಕರ ವಸತಿ ನಿಲಯದ ಆವರಣದಲ್ಲಿ ಒಂದು ಕೋಟಿ ತೊಂಬತ್ತೆöÊದು ಲಕ್ಷ ಅನುದಾನದಲ್ಲಿ ನಿರ್ಮಾಣವಾಗುವ ಪೊನ್ನಂಪೇಟೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ವೋಚ್ಚ ನ್ಯಾಯಾಲಯವು ಮತಾಂತರದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಮತಾಂತರಗೊAಡ ಗಿರಿಜನರಿಗೆ ಯಾವುದೇ ಸೌಲಭ್ಯ ಸರಕಾರ ನೀಡಬಾರದು ಎಂಬ ಆದೇಶವನ್ನು ಮಾಡುತ್ತಿದೆ. ಹೀಗಾಗಿ ಗಿರಿಜನರು ಸೌಲಭ್ಯದಿಂದ ವಂಚಿತರಾಗಬಾರದು ಎಂದು ಹೇಳಿದರು.
ಯಾವುದೇ ಧರ್ಮಗಳಿಗೆ ಮತಾಂತರಗೊಳ್ಳುವುದು ಸಂವಿಧಾನದ ಮುಖ್ಯ ಹಕ್ಕು. ಆದರೆ,À ಬಲವಂತವಾಗಿ ಮತಾಂತರಗೊಳಿಸುವುದು ಕಾನೂನು ವಿರೋಧದ ಕ್ರಿಯೆವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಉಚ್ಚ ನ್ಯಾಯಾಲಯ ನಿರ್ಧರಿಸಿದೆ ಎಂಬುದನ್ನು ಪರಿಗಣಿಸಬೇಕಾಗಿದೆ ಎಂದು ಹೇಳಿದರು.
ಮತಾಂತರಗೊAಡ ಬಹುತೇಕ ಕುಟುಂಬಗಳು ಇಂದು ಹೀನಾಯ ಸ್ಥಿತಿಯಲ್ಲಿ ಬದುಕುತ್ತಿರುವುದನ್ನು ನಾವು ನೋಡಬಹುದಾಗಿದೆ. ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರಕ್ಕೂ ಸ್ಥಳ ಸಿಗದ ಪರಿಸ್ಥಿತಿ ಇಂದು ಮತಾಂತರದಿAದ ನಿರ್ಮಾಣವಾಗುತ್ತಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ತಿಳಿ ಹೇಳಿದರು. ಗಿರಿಜನರ ಅಭಿವೃದ್ಧಿಗಾಗಿ ಸುಮಾರು ೧೦೦ ಕೋಟಿಗೂ ಅಧಿಕ ಅನುದಾನವನ್ನು ಬಳಸಲಾಗಿದೆ. ರಸ್ತೆ, ಕುಡಿಯುವ ನೀರು, ಸಮುದಾಯ ಭವನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆೆ.
ಈ ನಿಟ್ಟಿನಲ್ಲಿ ಗಿರಿಜನರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆ ನಿರ್ಮಾಣವಾಗಿದೆ. ಈಗಾಗಲೇ ೩ ಕೋಟಿ ಅನುದಾನದಲ್ಲಿ ಆದಿವಾಸಿ ಭವನ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಮತ್ತು ಗಿರಿಜನರ ನಡುವೆ ಇದ್ದ ಕಾನೂನು ತೊಡಕನ್ನು ಸರಿಪಡಿಸಿ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವ್ಯವಸ್ಥೆ ರೂಪಿಸಲಾಗಿದ್ದು, ಸುಮಾರು ಎರಡು ಕೋಟಿಗೂ ಹೆಚ್ಚು ಅನುದಾನ ಅವಶ್ಯಕತೆಯನ್ನು ಸರ್ಕಾರಕ್ಕೆ ತಿಳಿಸಲಾಗಿದೆ ಎಂದರು.
ಗಿರಿಜನರ ಸಮಸ್ಯೆಗಳನ್ನು ಬಗೆಹರಿಸಲು ಈ ಕ್ಷೇತ್ರ ವ್ಯಾಪ್ತಿಯಲ್ಲಿ ಅವಿರತ ಪ್ರಯತ್ನ ನಡೆಸಲಾಗಿದೆ. ಸಮುದಾಯದವರು ಮುಖ್ಯ ವಾಹಿನಿಗೆ ಬಂದು ಇತರ ಜನಾಂಗದವರAತೆ ಬದುಕು ನಡೆಸಲು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ. ಮಕ್ಕಳು ಶಿಕ್ಷಣವಂತರಾಗುವ ಮೂಲಕ ಸಮಾಜದಲ್ಲಿ ಐಕ್ಯತೆಯನ್ನ ಪ್ರತಿಪಾದಿಸಬೇಕು ಎಂದು ಕರೆ ನೀಡಿದರು.
ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ, ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಜಿಲ್ಲಾ ಸಮನ್ವಯ ಅಧಿಕಾರಿ ಹೊನ್ನೇಗೌಡ, ವೀರಾಜಪೇಟೆ, ಪೊನ್ನಂಪೇಟೆ ತಾಲೂಕು ಪರಿಶಿಷ್ಟ ವರ್ಗ ಕಲ್ಯಾಣ ಅಧಿಕಾರಿ ಗುರುಶಾಂತಪ್ಪ, ಕಚೇರಿ ಅಧೀಕ್ಷಕ ನವೀನ್, ನಿರ್ಮಿತಿ ಕೇಂದ್ರದ ತಾಲೂಕು ಅಧಿಕಾರಿ ಸಚಿನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎನ್.ಎನ್. ಅನೂಪ್ ಕುಮಾರ್, ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ, ನಿರ್ದೇಶಕರುಗಳಾದ ಗೋವಿಂದ, ಮಂಜುಳಾ, ಹಿರಿಯ ಎಂ.ಎನ್. ಕೃಷ್ಣ, ಉದ್ಯಮಿ ವಿಷ್ಣು, ಶಾಸಕರ ಅಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಸಹ ಕಾರ್ಯದರ್ಶಿ ನರಸಿಂಹ ಇದ್ದರು.