ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ, ಬಿಗಿ ಭದ್ರತೆ

ನಾಗ್ಪುರ, ಜ. ೧೪: ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಶನಿವಾರ ಜೀವ ಬೆದರಿಕೆ ಕರೆ ಬಂದಿದೆ. ಅಪರಿಚಿತ ವ್ಯಕ್ತಿಗಳು ನಿತಿನ್ ಗಡ್ಕರಿ ಹತ್ಯೆ ಮಾಡುವುದಾಗಿ ಬೆಳಿಗ್ಗೆ ಎರಡು ಬಾರಿ ಕರೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜೀವ ಬೆದರಿಕೆ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ಅವರ ನಾಗ್ಫುರದಲ್ಲಿನ ನಿವಾಸ ಹಾಗೂ ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಾಗ್ಫುರದ ಖಮ್ಲಾ ರಸ್ತೆಯಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಬೆಳಿಗ್ಗೆ ೧೧.೩೦ ರಿಂದ ಮಧ್ಯಾಹ್ನ ೧೨.೩೦ ರ ನಡುವೆ ಮೂರು ಬಾರಿ ಬೆದರಿಕೆ ಕರೆಗಳು ಬಂದಿವೆ. ತದನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಗೃಹ ನಿರ್ವಹಣೆಗೆ ಮಹಿಳೆಯರಿಗೆ ಆರ್ಥಿಕ ನೆರವು: ಸಿಎಂ

ಬೆAಗಳೂರು, ಜ. ೧೪: ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದ್ದು, ಒಂದು ಕುಟುಂಬದ ಮಹಿಳೆಗೆ ಸ್ವತಂತ್ರವಾಗಿ ಕನಿಷ್ಟ ಮನೆ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡುವ ಯೋಜನೆಯನ್ನು ಆಯವ್ಯಯದಲ್ಲಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರತೀ ಕುಟುಂಬಕ್ಕೆ ಮನೆ ನಡೆಸಲು ವಿಶೇಷ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗೆ ನೀಡಲಾಗುವುದು. ಸ್ತಿçÃಸಾಮರ್ಥ್ಯದ ಜೊತೆಗೆ ಸ್ತಿçÃಶಕ್ತಿ ಯೋಜನೆಯಡಿ ಮನೆ ನಡೆಸಲು, ಕೋವಿಡ್ ಉಪಚಾರ, ಆರೋಗ್ಯ, ಮುಂತಾದವುಗಳಿಗೆ ಸಹಾಯವಾಗುವ ವಿಶೇಷ ಯೋಜನೆ ಇದಾಗಿದೆ. ಸ್ತಿçÃಸಾಮರ್ಥ್ಯ ಯೋಜನೆಯನ್ನು ಮೊದಲು ಚಾಲನೆಗೊಳಿಸಿ ಅದನ್ನು ಅನುಷ್ಠಾನಗೊಳಿಸಿ, ಪ್ರತಿ ಮನೆಗೆ ಸ್ತಿçÃಯರ ಹೆಸರಿನಲ್ಲಿ ಸಹಾಯ ನೀಡಲಾಗುವುದು ಎಂದರು.

ಚೀನಾದಲ್ಲಿ ಸುಮಾರು ೬೦,೦೦೦ ಮಂದಿ ಕೋವಿಡ್‌ಗೆ ಬಲಿ

ಬೀಜಿಂಗ್, ಜ. ೧೪: ಕೋವಿಡ್ ಸಾಂಕ್ರಾಮಿಕ ರೋಗದ ಸ್ಥಿತಿಯ ಬಗ್ಗೆ ಅಂಕಿಅAಶ ಬಿಡುಗಡೆ ಮಾಡಲು ಚೀನಾ ಸರ್ಕಾರ ವಿಫಲವಾಗಿದೆ ಎಂಬ ದೂರುಗಳ ಬೆನ್ನಲ್ಲೇ ಡಿಸೆಂಬರ್ ಆರಂಭದಿAದ ಇಲ್ಲಿವರೆಗೆ ಸುಮಾರು ೬೦,೦೦೦ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಶನಿವಾರ ವರದಿಯಾಗಿದೆ. ಕೋವಿಡ್‌ನಿಂದ ಉಂಟಾದ ಉಸಿರಾಟದ ಸಮಸ್ಯೆಯಿಂದ ೫,೫೦೩ ಸಾವುಗಳು ಮತ್ತು ಕೋವಿಡ್‌ನೊಂದಿಗೆ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ೫೪,೪೩೫ ಸಾವುಗಳು ವರದಿಯಾಗಿವೆ. ಈ ಎಲ್ಲಾ ಸಾವುಗಳು ಆಸ್ಪತ್ರೆಗಳಲ್ಲಿ ಸಂಭವಿಸಿವೆ ಎಂದು ರಾಷ್ಟಿçÃಯ ಆರೋಗ್ಯ ಆಯೋಗ ಹೇಳಿದೆ.