*ಗೋಣಿಕೊಪ್ಪ, ಜ. ೧೪: ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಲಾಂಛನವನ್ನು ಗೋಣಿಕೊಪ್ಪ ಪ್ರೆಸ್ ಕ್ಲಬ್ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.
ಪೊನ್ನೋಲತಂಡ ಕಿರಣ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಲಾಂಛನ ಅನಾವರಣಗೊಂಡಿತು. ನಂತರ ಮಾತನಾಡಿದ ಅವರು, ಕೊಡವ ಕುಟುಂಬಗಳ ನಡುವೆ ಒಗ್ಗಟ್ಟು ಮತ್ತು ಒಮ್ಮತವನ್ನು ಬೆಳೆಸಲು ಪ್ರಥಮವಾಗಿ ಕೊಡವ ಟಗ್ ಆಫ್ ವಾರ್ ಅಕಾಡೆಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಾಕಿ ಮತ್ತು ಕ್ರಿಕೆಟ್ ಜೊತೆಯಲ್ಲಿಯೇ ಹಗ್ಗ ಜಗ್ಗಾಟ ಕ್ರೀಡೆಯನ್ನು ಕೊಡವ ಕೌಟುಂಬಿಕ ಕ್ರೀಡೆಯಾಗಿ ಜನಮಾನಸದಲ್ಲಿ ನೆಲೆಯೂರಿಸಲು ಈ ಪ್ರಯತ್ನದಿಂದ ಸಾಧ್ಯವಾಗಲಿದೆ ಎಂದು ತಿಳಿಸಿದರು.
೧೦ ಸದಸ್ಯರ ಆಡಳಿತ ಬಲವನ್ನು ಅಕಾಡೆಮಿ ಹೊಂದಿರಲಿದ್ದು, ಮುಂಬರುವ ವರ್ಷದಲ್ಲಿ ಹಗ್ಗಜಗ್ಗಾಟ ಕ್ರೀಡೋತ್ಸವ ನಡೆಸುವ ಕುಟುಂಬ ಓರ್ವ ಸದಸ್ಯನನ್ನು ಅಕಾಡೆಮಿಗೆ ಸೇರ್ಪಡೆಗೊಳಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮುಂದಿನ ತಿಂಗಳ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪೊನ್ನೋಲತಂಡ ಕುಟುಂಬ ಕಳೆದ ವರ್ಷ ಹಗ್ಗಜಗ್ಗಾಟ ಕ್ರೀಡೆಯನ್ನು ಕಕ್ಕಬೆಯಲ್ಲಿ ನಡೆಸಿ ಗಮನ ಸೆಳೆಯಿತು. ಸುಮಾರು ೪೨ ಕುಟುಂಬಗಳು ಭಾಗವಹಿಸಿದ್ದವು. ಪ್ರಥಮ ವರ್ಷವಾಗಿ ಆಚರಿಸಿದ ಕ್ರೀಡಾ ಹಿನ್ನೆಲೆಯನ್ನು ಮುಂದುವರಿಸುವ ಉದ್ದೇಶದೊಂದಿಗೆ ೨೦೨೩ನೇ ಸಾಲಿನಲ್ಲಿ ಚಟ್ಟಂಗಡ ಕುಟುಂಬಸ್ಥರು ಎರಡನೇ ವರ್ಷದ ಆಚರಣೆಯ ಆತಿಥ್ಯವನ್ನು ವಹಿಸಿಕೊಂಡು ಬಿ.ಶೆಟ್ಟಿಗೇರಿಯಲ್ಲಿ ಹಗ್ಗಜಗ್ಗಾಟ ಕ್ರೀಡೋತ್ಸವವನ್ನು ನಡೆಸಲಿದ್ದಾರೆ.
ಚಟ್ಟಂಗಡ ಕಪ್ ೨೦೨೩ ಕ್ರೀಡೋತ್ಸವವು ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಸಹಯೋಗದೊಂದಿಗೆ ‘ಕೊಡವ ಒಕ್ಕಡೊಕ್ಕಡ ಕೇರ್ ಬಲಿ ನಮ್ಮೆ’ಯ ಲಾಂಛನ ಅನಾವರಣ ವೆಸ್ಟ್ ನೆಮ್ಮಲೆಯ ಚಟ್ಟಂಗಡ ಕುಟುಂಬಸ್ಥರ ಐನ್ಮನೆಯಲ್ಲಿ ತಾ. ೧೬ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿದೆ.
ಲಾಂಛನ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಟ್ಟಂಗಡ ಕುಟುಂಬ ಸಮಿತಿ ಅಧ್ಯಕ್ಷ ಚಟ್ಟಂಗಡ ವಿಜಯ ಕಾರ್ಯಪ್ಪ ವಹಿಸಲಿದ್ದು, ಲಾಂಛನ ಅನಾವರಣ ವನ್ನು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡವ ಹಾಕಿ ಅಕಾಡೆಮಿಯ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಕೊಡವ ಟಗ್ ಆಫ್ ವಾರ್ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಮಾಹಿತಿ ಒದಗಿಸಿದರು.
ಉಳುವಂಗಡ ಲೋಹಿತ್ ಭೀಮಯ್ಯ, ಪೊನ್ನೋಲತಂಡ ಹರೀಶ್ ನಾಚಪ್ಪ, ಲಕ್ಷಿ÷್ಮ ನಾಚಪ್ಪ, ಪ್ರತಿನ್ ಮುತ್ತಣ್ಣ ಉಪಸ್ಥಿತರಿದ್ದರು.