ಸಿದ್ದಾಪುರ, ಜ. ೧೪: ದುಬಾರೆ ಹಾಡಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ತೆರಳದೇ ಗೈರು ಹಾಜರಾಗುತ್ತಿದ್ದಂತಹ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗಳಿಗೆ ತೆರಳುವಂತೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಂ ಅವರು ಮನವೊಲಿಸಿದರು. ದುಬಾರೆಯ ಹಾಡಿಯಲ್ಲಿ ವಾಸವಿರುವ ಮಕ್ಕಳು ಶಾಲೆಗಳಿಗೆ ತೆರಳದೇ ಮನೆಯಲ್ಲಿ ಕಾಲಹರಣ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ ಮಕ್ಕಳ ಮನೆ -ಮನೆಗಳಿಗೆ ತೆರಳಿ ಅವರುಗಳಿಗೆ ಶಾಲೆಗಳಿಗೆ ತೆರಳುವಂತೆ ಮನವೊಲಿಸಿದರು. ಈ ಸಂದರ್ಭ ಶಿಕ್ಷಕರು ಹಾಜರಿದ್ದರು.