ಮಡಿಕೇರಿ, ಜ. ೧೪: ಹಾಕತ್ತೂರು ಶಕ್ತಿ ಕೇಂದ್ರದಿAದ ಬೂತ್ ಅಭಿಯಾನ ಕಾರ್ಯಕ್ರಮ ಕಗ್ಗೋಡ್ಲು ಗ್ರಾಮದ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜಾರೋಹಣ ಹಾಗೂ ಬೂತ್ ಸಭೆಗಳನ್ನು ನಡೆಸುವ ಮೂಲಕ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ತಳಮಟ್ಟದಿಂದ ಪಕ್ಷ ಕಟ್ಟುವ ಜವಾಬ್ದಾರಿ ಬೂತ್ ಸಮಿತಿಗಳಿಗಿದ್ದು, ಪಕ್ಷಕ್ಕೆ ಪಕ್ಷದ ಕಾಯಕರ್ತರೇ ಬೆನ್ನೆಲುಬು; ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಪಿ.ಎಂ. ಕಿಸಾನ್ ಯೋಜನೆ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಅನ್ನಭಾಗ್ಯ ಯೋಜನೆ ಅಲ್ಲದೆ ಕೊರೊನ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ, ಗ್ರಾಮೀಣ ರಸ್ತೆಗಳು, ಹೀಗೆ ಹಲವಾರು ಯೋಜನೆಗಳ ಬಗ್ಗೆ ತಿಳಿಸಿ ಕಾರ್ಯಕರ್ತರು ಇದನ್ನು ಮನೆ ಮನೆಗೆೆ ತಲುಪಿಸುವ ಕಾರ್ಯ ಮಾಡುವಂತೆ ಕರೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಹಾಕತ್ತೂರು ಶಕ್ತಿ ಕೇಂದ್ರದ ಪ್ರಮುಖ ಪಿ.ಪಿ. ಸುಕುಮಾರ ವಹಿಸಿದ್ದರು. ಹಾಕತ್ತೂರು ಗ್ರಾಮ ಪಂಚಾಯಿತಿಗೆ ಪಕ್ಷದಿಂದ ನಿಯೋಜನೆಗೊಂಡ ವಿಸ್ತಾರಕರು ಹಾಗೂ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಕಾಂಗೀರ ಸತೀಶ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ಮರಗೋಡು ಶಕ್ತಿ ಕೇಂದ್ರ ಪ್ರಮುಖ ಪೂವಯ್ಯ ಹಾಜರಿದ್ದರು. ಈ ಸಂದರ್ಭ ಪಕ್ಷದ ಧ್ವಜಗಳನ್ನು ಕಾರ್ಯಕರ್ತರ ಮನೆಗಳಿಗೆ ಹಂಚಲಾಯಿತು.