ಪಾಲಿಬೆಟ್ಟ, ಜ. ೧೩: ಸಮೀಪದ ಚನ್ನಂಗಿ ಅಬ್ಬೂರು ಬಳಿ ಹುಲಿ ದಾಳಿಗೆ ಕೊಟ್ಟಿಗೆಯಲ್ಲಿದ್ದ ಎರಡು ಹಸು, ಒಂದು ಮೇಕೆ, ಕೋಳಿ ಬಲಿಯಾಗಿರುವ ಘಟನೆ ನಡೆದಿದೆ.
ಅಬ್ಬೂರು ಗ್ರಾಮದ ರತನ್ ಎಂಬವರು ತಮ್ಮ ಕೊಟ್ಟಿಗೆಯಲ್ಲಿ ಹಸು, ಮೇಕೆ, ಕೋಳಿಯನ್ನು ಕಟ್ಟಿ ಹಾಕಿದ್ದರು. ಬೆಳಗಿನ ಜಾವ ಸಂದರ್ಭದಲ್ಲಿ ಕೊಟ್ಟಿಗೆ ಒಳಗಿ ನುಗ್ಗಿದ ಹುಲಿ ಮೊದಲು ಕೋಳಿಯನ್ನು ತಿಂದಿದಲ್ಲದೆ ಎರಡು ಹಸುಗಳನ್ನು ತಿಂದು ಮೇಕೆಯನ್ನು ಕೊಂದು ಹಾಕಿದೆ. ಕೊಟ್ಟಿಗೆಯಲ್ಲಿದ್ದ ಮತ್ತೊಂದು ಮೇಕೆಯನ್ನು ಕೊಂದು ಹೊತ್ತೊಯ್ದಿದೆ.
ಬೆಳಿಗ್ಗೆ ಕೊಟ್ಟಿಗೆಯನ್ನು ಪರಿಶೀಲಿಸಿದ ಸಂದರ್ಭ ಎರಡು ಜಾನುವಾರುಗಳು ಬಲಿಯಾಗಿದ್ದು ಕೋಳಿ ಹಾಗೂ ಮೇಕೆ ಕಾಣೆಯಾಗಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವನ್ಯಜೀವಿ ವಲಯ ಅರಣ್ಯಾಧಿಕಾರಿ ದಿಲೀಪ್, ಉಪ ವಲಯ ಅರಣ್ಯಾಧಿಕಾರಿ ಚೆನ್ನವೀರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ನೀಡುವದಾಗಿ ಭರವಸೆ ನೀಡಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರರ ಅರುಣ್, ತೆಕ್ಕಡ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
-ವರದಿ: ಪುತ್ತಂ ಪ್ರದೀಪ್