ವೀರಾಜಪೇಟೆ, ಜ. ೧೩: ವೀರಾಜಪೇಟೆ ಸಮೀಪದ ಬೇಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಮಹೋತ್ಸವವು ತಾ. ೧೪ ರಂದು (ಇಂದು) ನಡೆಯಲಿದೆ. ಬೆಳಿಗ್ಗೆ ದೇವತಾ ಪ್ರಾರ್ಥನೆ, ಶ್ರೀ ಗಣಪತಿ ಹವನ, ಪಂಚಾಮೃತ ಅಭಿಷೇಕ, ಮಹಿಳಾ ಮಂಡಳಿಯವರಿAದ ಭಜನಾ ಕಾರ್ಯಕ್ರಮ ಜರುಗಲಿದೆ.

ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ ಮಕರ ಜ್ಯೋತಿ ಪೂಜೆ ನಡೆದು ಸಭಾ ಕಾರ್ಯಕ್ರಮ ಜರುಗಲಿದೆ. ಪುತ್ತೂರು ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕÀ ವಸಂತ ನಾಯಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತದನಂತರ ಬೆಂಗಳೂರಿನ ಖ್ಯಾತ ಕಲಾವಿದ ಪ್ರಹ್ಲಾದ್ ಆಚಾರ್ಯ ತಂಡದಿAದ ಮಾತನಾಡುವ ಗೊಂಬೆ ಹಾಗೂ ನೆರಳಿನಾಟ ನಡೆದು ಮಹಾಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೂಡಿಗೆ : ಕೂಡಿಗೆ ಸಮೀಪ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಸ್ಥಾನದ ವತಿಯಿಂದ ವರ್ಷಂಪ್ರತಿಯAತೆ ತಾ. ೧೪ ರಂದು (ಇಂದು) ಅಯ್ಯಪ್ಪ ಸ್ವಾಮಿಯ ಪೂಜೆ, ವಿವಿಧ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ಸೇರಿದಂತೆ ಸ್ವಾಮಿಯ ವಿಗ್ರಹ ಮೆರವಣಿಗೆಯ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಧರ್ಮದರ್ಶಿ ಎಲ್ಲೂಬಾಯಿ ತಿಳಿಸಿದ್ದಾರೆ.