ಮಡಿಕೇರಿ, ಜ. ೧೨: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧೀನ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿ ಸರ್ಕಾರಿ ಸ್ವಾಮ್ಯದ ೪ ಡಯಾಲಿಸಿಸ್ ಉಪಕರಣಗಳು ಮತ್ತು ಖಾಸಗಿ ಸಹಭಾಗಿತ್ವದಲ್ಲಿ ೭ ಉಪಕರಣಗಳು ಒಟ್ಟು ೧೧ ಡಯಾಲಿಸಿಸ್ ಉಪಕರಣಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಖಾಸಗಿ ಸಹಭಾಗಿತ್ವದ ೪ ಉಪಕರಣಗಳು ದುಸ್ಥಿತಿಯಲ್ಲಿದ್ದು, ತುರ್ತು ರಿಪೇರಿಗೆ ಕ್ರಮವಹಿಸಲಾಗಿದೆ. ಅದಾಗ್ಯೂ ಒಟ್ಟು ೭ ಉಪಕರಣಗಳಿಂದ ನಿರಂತರವಾಗಿ ಡಯಾಲಿಸಿಸ್ ಅನ್ನು ಸಾರ್ವಜನಿಕ ರೋಗಿಗಳಿಗೆ ಒದಗಿಸಲಾಗುತ್ತಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ. ಕಾರ್ಯಪ್ಪ ಅವರು ತಿಳಿಸಿದ್ದಾರೆ.