ಕೂಡಿಗೆ, ಜ. ೧೨: ಕೂಡಿಗೆಯ ಕೃಷಿ ಕ್ಷೇತ್ರದ ೪೭ ಎಕರೆಗಳಷ್ಟು ಪ್ರದೇಶದಲ್ಲಿ ಏರ್ಸ್ಟಿçಪ್ನೊಂದಿಗೆ ಹೆಲಿಪೋರ್ಟ್ ನಿರ್ಮಾಣ ಮಾಡುವ ಸಲುವಾಗಿ ದೆಹಲಿಯ ವಿಮಾನ ಯಾನ ಸಂಸ್ಥೆ ಸರ್ವೆ ಕಾರ್ಯವನ್ನು ಆರಂಭಿಸಿದೆ.ದೆಹಲಿಯ ಹೆಲಿಪೋರ್ಟ್ ಸರ್ವೆ ತಂಡದವರು ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿ ರುವ ಜಾಗವನ್ನು ವಿವಿಧ ಹಂತಗಳಲ್ಲಿ ಸರ್ವೆ ಕಾರ್ಯ ನಡೆಸಿ ನಂತರ. ಕೃಷಿ ಕ್ಷೇತ್ರದ ಸಮೀಪದ ಹಾರಂಗಿಯ ನದಿಯ ದಂಡೆಯವರೆಗೆ ಮತ್ತು ಸೈನಿಕ ಶಾಲೆಯ ತಡೆಗೋಡೆ ಯವರೆಗಿನ ಜಾಗದವರೆಗೆ ಸರ್ವೆ ನಡೆಸಿತು. ಹೆಲಿ ಪೋರ್ಟ್ ನಿರ್ಮಾಣಕ್ಕೆ ಹಣವನ್ನು ಕಾಯ್ದಿರಿಸಿದ ಮತ್ತು ರಾಜ್ಯ ಸರ್ಕಾರದ ಮೂಲಕ ದೆಹಲಿಯ ವಿಮಾನಯಾನ ಸಂಸ್ಥೆಗೆ ಪತ್ರ ವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿ ಮೊದಲ ಹಂತದ ಸರ್ವೆ ಕಾರ್ಯ ನಡೆಯುತ್ತಿದೆ. ಅದರ ಅನುಗುಣ ವಾಗಿ ಕೈಗೊಳ್ಳಬೇಕಾಗುವ ಎಲ್ಲಾ ಹಂತದ ಕಾರ್ಯಗಳನ್ನು ಕೈಗೊಳ್ಳಲಾ ಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.