ಮಡಿಕೇರಿ, ಜ. ೧೨: ಮಡಿಕೇರಿಯ ಐತಿಹಾಸಿಕ ಕೋಟೆಯ ಜೀರ್ಣೋದ್ಧಾರ ಮತ್ತು ನವೀಕರಣದ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಂಬAಧ ಮುಂದುವರಿದ ವಿಚಾರಣೆ ಇಂದು ರಾಜ್ಯ ಉಚ್ಚ ನ್ಯಾಯಲಯದಲ್ಲಿ ನಡೆಯಿತು.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಮತ್ತು ನ್ಯಾಯಮೂರ್ತಿ ಕಿನ್ನಗಿ ಇವರುಗಳು ವಾದ ಆಲಿಸಿದರು.
ಹಿರಿಯ ವಕೀಲರಾದ ಎನ್. ರವೀಂದ್ರನಾಥ ಕಾಮತ್ ಅವರು ವಾದ ಮಂಡಿಸಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನವೀಕರಣ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಸಂಬAಧಿತ ಗುತ್ತಿಗೆದಾರರು ಕೋಟೆಯ ಕಿಟಕಿಗಳಿಗೆ ಮರದ ಬಾಗಿಲುಗಳ ಬದಲು ಅಲ್ಯೂಮಿನಿಯಂ ಬಾಗಿಲು ಗಳನ್ನು ಅಳವಡಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು., ಈ ಅಳವಡಿಕೆಯಿಂದಾಗಿ ಪುರಾತನ ಕೋಟೆಯ ವೈಭವವಕ್ಕೆ ಧಕ್ಕೆಯುಂಟಾ ಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮುಂದೆ ಮಳೆಗಾಲದ ಮುನ್ನ ಕೆಲಸ ಶೀಘ್ರಗೊಳ್ಳದಿದ್ದರೆ ಅಪಾಯವಿದೆ, ಕಿಟಕಿಗಳನ್ನು ಸಕಾಲದಲ್ಲಿ ಅಳವಡಿಸಿ ಮುಚ್ಚದಿದ್ದರೆ, ಕೋಟೆಯೊಳಗೆ ಮಳೆ ನೀರು ಬೀಳುವ ಆತಂಕ ವ್ಯಕ್ತಪಡಿಸಿದರು.
ವಾದವನ್ನು ಆಲಿಸಿದ ನ್ಯಾಯಾಧೀಶರು ಟೆಂಡರ್ನಲ್ಲಿ ಸೂಚಿಸಲ್ಪಟ್ಟ ನಿರ್ಬಂಧಗಳಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಸರ್ಕಾರ ಬದ್ಧವಾಗಿರುವಂತೆ ಸೂಚಿಸಿದರು. ಸಕಾಲದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ನಿರ್ದೇಶಿಸಿ ದರು. ಇಲ್ಲದಿದ್ದರೆ ನ್ಯಾಯಾಲಯವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು. ಮರದ ಬಳಕೆ ಬದಲು ಅಲ್ಯೂಮಿ ನಿಯಂ ಬಾಗಿಲುಗಳನ್ನು ಕಿಟಕಿಗಳಿಗೆ ಬಳಸಿರುವುದರ ಬಗ್ಗೆ ಮುಂದೆ ವರದಿ ಸಲ್ಲ್ಲಿಸುವಂತೆಯೂ ಸೂಚಿಸಿ ದರು. ಮುಂದಿನ ವಿಚಾರಣೆ ಯನ್ನು ಜ. ೩೦ಕ್ಕೆ ನಿಗದಿಗೊಳಿಸಲಾಗಿದೆ.