ಕೆಲವು ದಿನಗಳ ಹಿಂದೆ ನಾಗರಹೊಳೆ ಹುಲಿ ಸಂರಕ್ಷಣಾ ಮೀಸಲು ಅರಣ್ಯದ ಬದಿಯಲ್ಲಿ ವಾಹನ ಸವಾರರು ತಿಂಡಿ ಯನ್ನು ತಿಂದು ಎಸೆದ ಪ್ಲಾಸ್ಟಿಕ್ ಪೊಟ್ಟಣಗಳನ್ನು ಜಿಂಕೆಗಳು ತಿನ್ನುತ್ತಿರುವುದು ಹವ್ಯಾಸಿ ಛಾಯಾಗ್ರಾಹಕ ಅಪ್ಪನೆರವಂಡ ವಿನುಕುಂಞಪ್ಪ ಕ್ಯಾಮಾರಾದಲ್ಲಿ ಸೆರೆಯಾಗಿದೆ.

ಹುಲಿ ಮೀಸಲು ಅರಣ್ಯದಲ್ಲಿ ವಾಹನ ನಿಲ್ಲಿಸುವುದಾಗಲಿ, ವನ್ಯಪ್ರಾಣಿ ಗಳಿಗೆ ಆಹಾರ ನೀಡುವುದಾಗಲಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಕಬಾರದೆಂದು ನಿಷೇಧವಿದೆ. ಆದರೂ ವಾಹನ ಸವಾರರು ತಿಂದ ತಿಂಡಿ ತಿನಿಸುಗಳ ಪ್ಯಾಕೇಟನ್ನು ಬಿಸಾಡಿರುವುದು ಅಲ್ಲಲ್ಲಿ ಕಂಡು ಬರುತ್ತಿವೆ. ಬಿಸಿಲ ಬೇಗೆಯ ನಡುವೆ ಮೇವು ಅರಸಿ ಬಂದ ವನ್ಯಜೀವಿಗಳು ಪ್ಲಾಸ್ಟಿಕ್ ತ್ಯಾಜ್ಯ ತಿನ್ನುತ್ತಿವೆ. - ಕರುಣ್