ಪಿ.ಜಿ.ಆರ್. ಮಡಿಕೇರಿ, ಜ. ೧೨: ಕಾಫಿ ಹಬ್ಬ, ಜೇನು ಹಬ್ಬಗಳಿಗೆ ಆತಿಥ್ಯ ನೀಡಿ ಸ್ಥಳೀಯರನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿದ್ದ ಐತಿಹಾಸಿಕ ಹಿನ್ನೆಲೆಯ ರಾಜಾಸೀಟು ಇದೀಗ ಯಾರಿಗೂ ಬೇಡವಾಗಿದೆ. ಉದ್ಯಾನವನಕ್ಕೆ ಮತ್ತಷ್ಟು ಶೋಭೆ ತರಲು ನಿರ್ಮಿಸಲಾದ ‘ಗ್ರೇಟರ್’ ರಾಜಾಸೀಟಿನಲ್ಲಿ ಯಾರು ಏನು ಮಾಡಿದರೂ ಅರಿವೇ ಬಾರದಂತೆ ಭದ್ರತಾ ವೈಫಲ್ಯ ಸ್ಪಷ್ಟ ಗೋಚರವಾಗಿದೆ. ಅನೇಕ ವರ್ಷಗಳಿಂದ ಚಾಲನೆ ಸ್ಥಗಿತಗೊಂಡಿರುವ ಪುಟಾಣಿ ರೈಲಿನ ಹಳಿಯ ಸಮೀಪದ ಜಾಗ ಕಸ-ತ್ಯಾಜ್ಯಗಳ ತಾಣವಾಗಿದೆ. ಬೆಳಗ್ಗಿನ ವಾಯುವಿಹಾರಕ್ಕೆ ಉದ್ಯಾನವನಕ್ಕೆ ತೆರಳುವ ಸ್ಥಳೀಯರು ಸೇರಿದಂತೆ ವಾರಾಂತ್ಯದಲ್ಲಿ ದೌಡಾಯಿಸುವ ಪ್ರವಾಸಿಗರಿಗೆ ಒಂದು ರೀತಿ ಅಸಹನೀಯ ವಾತಾವರಣ ಮೂಡಿಸಿದ್ದು, ಮುಜುಗರ ಸೃಷ್ಟಿಯಾಗಿದೆ. ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ ತಕ್ಷಣ ಈ ಸಂಬAಧ ಗಮನಹರಿಸಿ ಉದ್ಯಾನವನದ ಸಹಜ ಆಕರ್ಷಣೆ ಮರುಕಳಿಸುವಂತೆ ಸ್ಥಳೀಯ ನಿವಾಸಿಗಳು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.ಕಳೆದ ತಿಂಗಳು ಕಾಫಿ - ಜೇನು ಉತ್ಸವ ಜಿಲ್ಲಾಡಳಿತ ಹಾಗೂ ತೋಟಗಾರಿಕಾ ಇಲಾಖೆಯ ಹೊಸ ಪರಿಕಲ್ಪನೆಯಡಿಯಲ್ಲಿ ಕಾಫಿ-ಜೇನು ಉದ್ಯಮಿಗಳ ಉತ್ಸಾಹದಿಂದಾಗಿ ಅತ್ಯುತ್ತಮವಾಗಿ ಮೂಡಿಬಂದಿತಾದರೂ ಉತ್ಸವ ಸಂಪನ್ನಗೊAಡು ಬಹುತೇಕ ಒಂದು ತಿಂಗಳಾದರೂ ಜೇನು ಹಬ್ಬಕ್ಕೆ ಸಂಬAಧಿಸಿದ ಫಲಕಗಳು ಉದ್ಯಾನವನದಲ್ಲೇ ಅನಾಥವಾಗಿ ಬಿದ್ದಿವೆ. ಉದ್ಯಾನವನದ ಸೌಂದರ್ಯಕ್ಕೆ ಧಕ್ಕೆ ತರುವಂತಿದೆ

ರಾಜಾಸೀಟಿನ ಅಂದ ಹೆಚ್ಚಿಸುವ ಸಲುವಾಗಿ ‘ಗ್ರೇಟರ್’ ರಾಜಾಸೀಟು ಉತ್ತಮವಾಗಿ ಮೂಡಿಬಂದಿದೆ. ಉದ್ಯಾನವನದ ವಿಸ್ತೀರ್ಣವು ಹೆಚ್ಚಾಗಿದೆ. ಉದ್ಯಾನವನದಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ ಮುಖ್ಯದ್ವಾರದ ಬಳಿ ಸಿ.ಸಿ ಕ್ಯಾಮರಾ ಇದೆ. ಆದರೆ ನೂತನ ಗ್ರೇಟರ್ ರಾಜಾಸೀಟ್ ಯಾರು ಏನು ಮಾಡಿದರೂ ಅರಿವಿಗೇ ಬಾರದಂತಹÀ ಸ್ಥಳದಲ್ಲಿ ಇದ್ದು, ಇಲ್ಲಿ ಭದ್ರತಾ ಸಿಬ್ಬಂದಿ ಆಗಲಿ ಸಿ.ಸಿ ಕ್ಯಾಮರವಾಗಲಿ ಇಲ್ಲದ್ದರಿಂದ ಶೌಚಾಲಯದ ದ್ವಾರವನ್ನೇ ಮುರಿದಿರುವ ಪುಂಡರಿAದಾಗಿ ಗಬ್ಬುನಾತ ಹೊರಸೂಸುತ್ತಿದೆ.

ಗ್ರೇಟರ್ ರಾಜಾಸೀಟು ಇನ್ನೂ ಕೂಡ ಅಧಿಕೃತವಾಗಿ ಉದ್ಘಾಟನೆಗೊಳ್ಳದಿರುವುದು ವಿಪರ್ಯಾಸಕರ.

ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ ಮಡಿಕೇರಿಯ ಈ ಪ್ರಸಿದ್ಧ ಪ್ರವಾಸಿ ತಾಣವನ್ನು ಕಲುಷಿತಗೊಳ್ಳದಂತೆ ರಕ್ಷಿಸುವುದರೊಂದಿಗೆ ಸೂಕ್ತ ನಿರ್ವಹಣಾ ವ್ಯವಸ್ಥೆಯನ್ನು ಕೈಗೊಳ್ಳಬೇಕಾಗಿದೆ.ನಗರದಲ್ಲೇ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ ನಿಯಮ ಹೇರಲಾಗಿದ್ದು, ಆಗಿಂದಾಗ್ಗೆ ಅಧಿಕಾರಿಗಳ ತಂಡ ಅಂಗಡಿ-ಮಳಿಗೆಗಳ ಮೇಲೆ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸುತ್ತಿರುತ್ತಾರೆ. ಆದರೆ ಪ್ರಸಿದ್ಧ ಪ್ರವಾಸಿ ತಾಣದಲ್ಲಿಯೇ ಇದುವರೆಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸದೇ ಇರುವುದರಿಂದ ಕೆಲವೊಮ್ಮೆ ಬೆಳಗ್ಗಿನ ವಾಯುವಿಹಾರಕ್ಕೆ ತೆರಳುವವರನ್ನು ಉದ್ಯಾನವನದಲ್ಲಿ ಅಲ್ಲಲ್ಲಿ ಬಿದ್ದಿರುವ ಈ ಪ್ಲಾಸ್ಟಿಕ್ ತ್ಯಾಜ್ಯ ಸ್ವಾಗತಿಸುತ್ತಿದೆ. ಉದ್ಯಾನವನದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗುತ್ತಾದರೂ, ಉದ್ಯಾನವನದ ಹಿಂಭಾಗ ರೈಲ್ವೇ ಹಳಿಯ ಬಳಿ ತ್ಯಾಜ್ಯ ರಾಶಿಗಟ್ಟಲೆ ಬಿದ್ದಿದೆ. ಕೆಲವರು ಟಿಕೆಟ್ ರಹಿತವಾಗಿ ರೈಲ್ವೇ ಹಳಿಯ ಬಳಿಯಿಂದ ಉದ್ಯಾನವನಕ್ಕೆ ಸುಲಭವಾಗಿ ಪ್ರವೇಶಿಸುತ್ತಿದ್ದು, ಅಲ್ಲೇ ತ್ಯಾಜ್ಯ ಎಸೆದು ಪರಿಸರವನ್ನು ಕಲುಷಿತಗೊಳಿಸುತ್ತಿದ್ದಾರೆ.