ಮಡಿಕೇರಿ, ಜ. ೧೨: ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮವಾದ ಮಗ್ಗುಲ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ತಾ.೧೩ರಂದು (ಇಂದು) ನಡೆಯಲಿದೆ.

ಮಗ್ಗುಲ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಅಂಬಟ್ಟಿ, ಬಿಟ್ಟಂಗಾಲ, ನಲ್ವತ್ತೋಕ್ಲು, ಕೊಮ್ಮೆತೋಡು, ಚೋಕಂಡಳ್ಳಿ, ಐಮಂಗಲ ಈ ಗ್ರಾಮಗಳಲ್ಲಿನ ಗ್ರಾಮಸ್ಥರು ಹಾಗೂ ತೋಟದ ಮಾಲೀಕರು ಕಾಫಿ ಕುಯ್ಯುವ ಕೆಲಸವನ್ನು ಮತ್ತು ಇನ್ನಿತರ ತೋಟದ ಕೆಲಸಗಳನ್ನು ನಿಲ್ಲಿಸುವಂತೆ ಹಾಗೂ ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಿದ್ದಾಪುರ: ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅತ್ತೂರು, ನಲ್ಲೂರು, ಪೊನ್ನತ್‌ಮೊಟ್ಟೆ, ಚೇರಳ ಶ್ರೀಮಂಗಲ, ಹೋರೂರು, ಮೇದೂರು ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಸಲಗವನ್ನು ಸೆರೆಹಿಡಿಯುವ ಕಾರ್ಯಾಚರಣೆಯು ತಾ. ೧೩ರಿಂದ (ಇಂದಿನಿAದ) ನಡೆಯಲಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ಬಿ. ಶಿವರಾಂ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಸ್ಥರು, ಸಾರ್ವಜನಿಕರು, ಕಾರ್ಮಿಕರು, ಶಾಲಾ ಮಕ್ಕಳು, ವಾಹನ ಚಾಲಕರು, ದ್ವಿಚಕ್ರ ಸವಾರರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ ಎಚ್ಚರಿಕೆಯನ್ನು ವಹಿಸಬೇಕೆಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಂ ಮನವಿ ಮಾಡಿದ್ದಾರೆ. ಸಲಗ ಕಂಡುಬAದರೆ ಅರಣ್ಯ ಇಲಖಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.