ಮಡಿಕೇರಿ, ಜ. ೧೨: ಈ ಬಾರಿ ೧೫ನೇ ವಿಶ್ವಕಪ್ ಹಾಕಿ ಪಂದ್ಯಾವಳಿ ಸತತ ಎರಡನೇ ಬಾರಿಗೆ ಭಾರತದಲ್ಲಿ ಜರುಗುತ್ತಿದೆ. ಒಡಿಶಾ ರಾಜ್ಯ ಇದರ ಆತಿಥ್ಯ ವಹಿಸಿಕೊಂಡಿದ್ದು, ತಾ. ೧೩ ರಿಂದ (ಇಂದಿನಿAದ) ೨೯ರ ವರೆಗೆ ವಿಶ್ವಕಪ್ ಸಮರ ಹಾಕಿ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಅತಿಥೇಯ ಭಾರತವೂ ಸೇರಿದಂತೆ ೧೬ ರಾಷ್ಟçಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.

ದೇಶದಲ್ಲೇ ದೊಡ್ಡದಾಗಿರುವ ಇದೀಗ ತಾನೆ ರೊರ್ಕೆಲಾದಲ್ಲಿ ಉದ್ಘಾಟನೆಗೊಂಡಿರುವ ವಿನೂತನ ಮಾದರಿಯ ಸುಸಜ್ಜಿತ ಹಾಕಿ ಕ್ರೀಡಾಂಗಣ ಹಾಗೂ ಭುವನೇಶ್ವರದಲ್ಲಿ ಪಂದ್ಯಾಟ ಜರುಗಲಿದೆ. ಭಾರತ ಡಿ ಗುಂಪಿನಲ್ಲಿದ್ದು, ಈ ಬಾರಿ ಸಾಕಷ್ಟು ನಿರೀಕ್ಷೆಯನ್ನು ಹೊಂದಲಾಗಿದೆ. ಈತನಕದ ೧೪ ವಿಶ್ವಕಪ್‌ನಲ್ಲಿ ಭಾರತ ೧೯೭೫ರಲ್ಲಿ ಮಾತ್ರ ವಿಜೇತವಾಗಿತ್ತು.