ಮಡಿಕೇರಿ, ಜ. ೧೨: ಕರ್ನಾಟಕ ರಾಜ್ಯ ಯುವ ಸಂಘಗಳ ವತಿಯಿಂದ ನೀಡಲಾಗುವ ರಾಜ್ಯ ಯುವ ಪ್ರಶಸ್ತಿಗೆ ಕಗ್ಗೋಡ್ಲು ಗ್ರಾಮದ ಕುಂಜಿಲನ ಮಧು ಮೋಹನ್ ಆಯ್ಕೆಯಾಗಿದ್ದಾರೆ.
ಇವರು ಕಗ್ಗೋಡ್ಲು ಕಾವೇರಿ ಯುವಕ ಸಂಘದ ಸದಸ್ಯರಾಗಿ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷರಾಗಿ, ಕೊಡಗು ಜಿಲ್ಲಾ ಯುವ ಒಕ್ಕೂಟದ ಖಜಾಂಚಿಯಾಗಿ, ಭಗವತಿ ದೇವಾಲಯ ಸಮಿತಿ ಸದಸ್ಯರಾಗಿ, ಕಗ್ಗೋಡ್ಲು ಗಣೇಶ ಸೇವಾ ಸಮಿತಿ ಸದಸ್ಯರಾಗಿ ಅನೇಕ ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಸುಬ್ರಹ್ಮಣ್ಯದಲ್ಲಿ ತಾ. ೧೮ ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ. ಸುಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.