ಸೋಮವಾರಪೇಟೆ, ಜ. ೧೨: ಪಟ್ಟಣದ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಎನ್.ಡಿ. ವಿನೋದ್‌ಕುಮಾರ್ ಪುನರಾಯ್ಕೆಗೊಂಡಿದ್ದಾರೆ. ಇತ್ತೀಚೆಗೆ ದೇವಾಲಯದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ನಡೆಯಿತು. ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸನ್ನ ನಾಯರ್, ಉಪಾಧ್ಯಕ್ಷರುಗಳಾಗಿ ಕೆ.ಎ .ರಾಧಾಕೃಷ್ಣನ್, ಪಿ.ಕೆ.ರಾಜನ್, ಸಹ ಕಾರ್ಯದರ್ಶಿಯಾಗಿ ಕೆ.ಎನ್. ರಾಜೇಂದ್ರ, ಖಜಾಂಚಿಯಾಗಿ ಎನ್.ಜಿ. ಮೋಹನ್, ನಿರ್ದೇಶಕರುಗಳಾಗಿ ವೇಲಾಯುಧನ್, ಎನ್.ಜಿ. ಜನಾರ್ಧನ್, ಆರ್.ಸಿ. ಗಣೇಶ್, ಕೆ.ಸಿ. ದಿನೇಶ್, ಜಿ. ಗಣೇಶ್, ಶಶಿ, ಆರ್.ಸಿ. ಅಣ್ಣಪ್ಪ, ವಾಸುದೇವನ್, ರವಿ, ರಾಮು, ಎನ್.ಜಿ. ಪದ್ಮನಾಭ ಅವರುಗಳು ನೇಮಕಗೊಂಡಿದ್ದಾರೆ.