ಮಡಿಕೇರಿ, ಜ. ೬: ವೀರಾಜಪೇಟೆಯ ಕಾವೇರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಕೊಡಗಿನ ಅಮ್ಮತ್ತಿ ಕಾವಾಡಿಯಲ್ಲಿರುವ ಕಾಮಧೇನು ಗೋಶಾಲೆಗೆೆ ಹಾಗೂ ಮಗ್ಗುಲದಲ್ಲಿರುವ ವಿನಾಯಕ ನರ್ಸರಿಗೆ ಕ್ಷೇತ್ರ ಪ್ರವಾಸ ಕೈಗೊಂಡಿದ್ದರು. ಆಧುನಿಕ ತಂತ್ರಜ್ಞಾನದ ಬದುಕಿಗೆ ಹೊಂದಿಕೊAಡಿರುವ ಇಂದಿನ ವಿದ್ಯಾರ್ಥಿಗಳಿಗೆ ಹಳ್ಳಿ ಬದುಕಿನ ಸೊಗಡನ್ನು ಪರಿಚಯಿಸಿಕೊಡುವ ಸಲುವಾಗಿ ಈ ಕ್ಷೇತ್ರ ಪ್ರವಾಸ ನೆರವಾಯಿತು. ಭಾರತೀಯ ಗೋತಳಿಗಳ ಸಂವರ್ಧನೆ ಮತ್ತು ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಗೋಶಾಲೆಯ ಬಗ್ಗೆ ವಿವರಣೆಯನ್ನು ರಾಘವೇಂದ್ರ ಭಟ್ ಅವರು ನೀಡಿದರು.
ನಂತರ ಮಗ್ಗುಲದಲ್ಲಿರುವ ವಿನಾಯಕ ಸಸ್ಯ ನರ್ಸರಿಗೆ ಭೇಟಿ ನೀಡಿ ಅಲ್ಲಿರುವ ಹಲವಾರು ಸಸ್ಯ ತಳಿಗಳು ಹಾಗೂ ಅದರ ಪೋಷಣೆಯ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡರು. ಭರತ್ ಅವರು ವಿವಿಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಕಿಯರಾದ ಜ್ಯೋತಿ ಎಂ.ಎಸ್., ಲೀನಾ ಸಿ.ಡಿ., ಉಷಾ ಬಿ.ಪಿ., ಚೈತ್ರ ಹಾಗೂ ಸುರಯ್ಯ ಅವರು ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡಿದ್ದರು.