ನಾಪೋಕ್ಲು, ಜ. ೬: ಉತ್ತಮ ಪರಿಸರದಲ್ಲಿ ಸರಳತೆ ಹಾಗೂ ಮೌಲ್ಯಯುತ ಶಿಕ್ಷಣ ದೊರೆಯುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಗುರಿ ಸಾಧಿಸಬಹುದು ಎಂದು ವೀರಾಜಪೇಟೆಯ ಡಾ. ರೇಖಾ ಚಿಣ್ಣಪ್ಪ ಹೇಳಿದರು.

ಇಲ್ಲಿನ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯನ್ನು ಇರಿಸಿಕೊಳ್ಳಬೇಕು. ಉತ್ತಮ ಗುಣ ನಡತೆಗಳನ್ನು ರೂಡಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು.

ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಬೊಪ್ಪಂಡ ಎಂ. ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ದ್ಯೇಯೋದ್ದೇಶ ಹಾಗೂ ಕಾರ್ಯಚಟುವಟಿಕೆಯ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಮಕ್ಕಿ ಸುಬ್ರಮಣ್ಯ, ಬೊಪ್ಪಂಡ ಕುಶಾಲಪ್ಪ, ಅಪ್ಪಾರಂಡ ಅಪ್ಪಯ್ಯ, ಬಿದ್ದಾಟಂಡ ಮುತ್ತಣ್ಣ, ಬಿದ್ದಾಟಂಡ ಪಾಪ ಮುದ್ದಯ್ಯ ಪ್ರೊ. ಕಲ್ಯಾಟಂಡ ಪೂಣಚ್ಚ, ಕೊಂಬAಡ ಗಣೇಶ್, ನೆರವಂಡ ಸುನಿಲ್, ಬೊಳ್ಳಚೆಟ್ಟಿರ ಸುರೇಶ್, ನಾಯಕಂಡ ದೀಪು ಚಂಗಪ್ಪ, ಪ್ರಾಂಶುಪಾಲೆ ಶಾರದಾ ಅಪ್ಪಣ್ಣ ಇನ್ನಿತರರು ಉಪಸ್ಥಿತರಿದ್ದರು.

ಪರಿಧಿ ಪೊನ್ನಮ್ಮ ಪ್ರಾರ್ಥಿಸಿ, ಶಿಕ್ಷಕಿ ಮುಂಡAಡ ಕವಿತ ಸ್ವಾಗತಿಸಿ. ವಿದ್ಯಾರ್ಥಿ ನಾಯಕ ಪರಮ್ ಪೂವಣ್ಣ ವಿದ್ಯಾರ್ಥಿ ಸಂಘದ ವರದಿ ವಾಚಿಸಿದರೆ, ಪ್ರಾಂಶುಪಾಲೆ ಶಾರದ ಅಪ್ಪಣ್ಣ ಶಾಲಾ ವರದಿ ವಾಚಿಸಿದರು. ಸಂದೇಶ ವಾಚನವನ್ನು ಶಿಕ್ಷಕಿ ತನುಜಾ, ಕ್ರೀಡಾ ವರದಿಯನ್ನು ಸರಿತಾ ವಾಚಿಸಿ, ಶೋಭ ಅತಿಥಿಯನ್ನು ಪರಿಚಯಿಸಿದರು. ಪಾಲಚಂಡ ಲೀಲಾವತಿ ಮತ್ತು ಪಾಡಿಯಮ್ಮಂಡ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ, ಕಂಗಾAಡ ಸ್ಮಿತ ವಂದಿಸಿದರು. ಈ ಸಂದರ್ಭ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ ನೀಡಿ ಪುರಸ್ಕರಿಸಿದರು ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು.