ಕೂಡಿಗೆ, ಜ. ೬: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆರಂಭವಾಗುತ್ತಿದAತೆಯೇ ಕಳೆದ ಮೂರು ತಿಂಗಳ ಹಿಂದೆ ನಡೆದ ೧೫ನೇ ಹಣಕಾಸು ಯೋಜನೆಯ ಕಾಮಗಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಮುಗಿದಿದ್ದರೂ ಸಹ ಅಧ್ಯಕ್ಷೆ ಕಾಮಗಾರಿಗಳಿಗೆ ಸಂದಾಯ ಮಾಡಬೇಕಾದ ಹಣದ ಚೆಕ್‌ಗಳಿಗೆ ಸಹಿ ಹಾಕಿಲ್ಲ ಮತ್ತು ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪಿ. ಹಮೀದ್, ಅನಂತ್, ಅರುಣ್ ರಾವ್, ಶಿವಕುಮಾರ್, ಚಂದ್ರು, ಪಲ್ಲವಿ, ವಾಣಿ ಸಭೆಯಲ್ಲಿ ಅಧ್ಯಕ್ಷರೊಂದಿಗೆ ಮಾತಿನ ಚಕಮುಖಿ ನಡೆಸಿದರು.
ಸಭಾ ನಡವಳಿಕೆಯ ಪುಸ್ತಕದಲ್ಲಿ ಕಳೆದ ಮೂರು ತಿಂಗಳುಗಳಿAದ ನಡೆದ ಕಾಮಗಾರಿಗಳ ವಿವರ ಮತ್ತು ಕೈಗೊಳ್ಳುವ ವಿಷಯಗಳ ಪ್ರಸ್ತಾವನೆ ಸೇರಿದಂತೆ ಎಲ್ಲಾ ವಿಷಯಗಳನ್ನು ನಡವಳಿಕೆಯ ಪುಸ್ತಕದಲ್ಲಿ ಬರೆದಿದ್ದರೂ ಸಹ ಅಧ್ಯಕ್ಷೆ ಕಾಮಗಾರಿಗಳನ್ನು ವೀಕ್ಷಣೆ ಮಾಡದೆ ಸಹಿ ಹಾಕದೆ ನಿರ್ಲಕ್ಷö್ಯ ಧೋರಣೆ ತೋರಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ೭ ಮಂದಿ ಸದಸ್ಯರು ನಡವಳಿಕೆಯ ಪುಸ್ತಕವನ್ನು ತೆಗೆದುಕೊಂಡು ಸಭಾತ್ಯಾಗ ಮಾಡಿದ ಘಟನೆ ನಡೆಯಿತು.
ನಂತರ ಸಭಾತ್ಯಾಗ ಮಾಡಿದ ೭ ಮಂದಿ ಸದಸ್ಯರಾದ ಟಿ.ಪಿ. ಹಮೀದ್, ಅನಂತ್, ಅರುಣ್ ರಾವ್, ಶಿವಕುಮಾರ್, ಚಂದ್ರು, ಪಲ್ಲವಿ, ವಾಣಿ ಅವರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡವಳಿಕೆಯ ಪುಸ್ತಕ ಹಿಡಿದುಕೊಂಡು ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದರು. ಸಭೆಯಲ್ಲಿ ಹಾಜರಿದ್ದ ೧೫ ಮಂದಿ ಸದಸ್ಯರಲ್ಲಿ ೭ ಮಂದಿ ಸಭಾತ್ಯಾಗ ಮಾಡಿದರೂ ಸಹ ೮ ಮಂದಿ ಸದಸ್ಯರ ಬಹುಮತ ಇದ್ದರೂ ಸಹ ಮಾಸಿಕ ಸಭೆ ನಡೆಯದೆ ಮುಂದೂಡಲಾಯಿತು.
ಕಳೆದ ಎರಡು ತಿಂಗಳುಗಳಿAದ ನನಗೆ ಅನಾರೋಗ್ಯವಾದ ಕಾರಣದಿಂದಾಗಿ ಸಭೆಯನ್ನು ನಡೆಸಲಾಗಿಲ್ಲ. ಅಲ್ಲದೆ ಕಾಮಗಾರಿಗಳು ಎಲ್ಲಿ ನಡೆದಿವೆ ಎಂದು ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ನಡೆಸಿ ವ್ಯಕ್ತಿಗೆ ಚೆಕ್ ರೂಪದ ಹಣವನ್ನು ನೀಡಲಾಗುವುದು ಎಂದÀÄ ಅಧ್ಯಕ್ಷೆ ಮಂಗಳಾ ಪ್ರಕಾಶ್ ಪ್ರತಿಕ್ರಿಯಿಸಿದರು. ಗ್ರಾಮ ಪಂಚಾಯಿತಿ ಮಾಸಿಕ ಸಭೆ ನಡೆದು ಆಡಳಿತ ಮಂಡಳಿಯ ತೀರ್ಮಾನದಂತೆ ಹಣದ ಇರುವಿಕೆಯನ್ನು ನೋಡಿಕೊಂಡು ಕಾಮಗಾರಿಗಳನ್ನು ನಡೆಸಿದವರಿಗೆ ಹಣವನ್ನು ನೀಡಲು ಮುಂದಾಗುತ್ತೇವೆ ಎಂದು ಅಭಿವೃದ್ಧಿ ಅಧಿಕಾರಿ ಆಯಿಷಾ ತಿಳಿಸಿದರು. ಸಭಾತ್ಯಾಗ ಮಾಡಿದ ನಂತರ ಅಧ್ಯಕ್ಷರು ಸೇರಿದಂತೆ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಸದಸ್ಯರಾದ ರತ್ನಮ್ಮ, ಕೆ.ಟಿ. ಗಿರೀಶ್, ಜಯಶ್ರೀ, ಜಯಶೀಲ, ರವಿ, ಲಕ್ಷಿö್ಮ, ಅಭಿವೃದ್ಧಿ ಅಧಿಕಾರಿ ಆಯಿಷಾ, ಕಾರ್ಯದರ್ಶಿ ಪುನೀತ್ ಸಭೆಯಲ್ಲಿಯೇ ಉಳಿದುಕೊಂಡಿದ್ದರು. ಆದರೆ ಅಧ್ಯಕ್ಷೆ ಮಂಗಳಾ ಪ್ರಕಾಶ್ ಸಭೆಯನ್ನು ಮುಂದೂಡಿದರು.