ಮಡಿಕೇರಿ, ಜ. ೬: ಭಾರತ ಸರಕಾರ, ನೆಹರೂ ಯುವ ಕೇಂದ್ರ ಮಡಿಕೇರಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟ ಮಡಿಕೇರಿ, ಶ್ರೀ ವಿಘ್ನೇಶ್ವರ ಮಹಿಳಾ ಮಂಡಳಿ ಆರ್ಜಿ - ಕಲ್ಲುಬಾಣೆ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿಯವರಿಗಾಗಿ ತಾಲೂಕು ಗ್ರಾಮೀಣ ಕ್ರೀಡಾಕೂಟ ನಡೆಯಿತು.

ಕಲ್ಲುಬಾಣೆ ಸಮೀಪದ ಬದ್ರಿಯಾ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕ್ರೀಡಾಕೂಟವನ್ನು ವೀರಾಜಪೇಟೆ ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕಿ ಜಲಜಾಕ್ಷಿ ಉದ್ಘಾಟಿಸಿದರು. ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯೆ ಫಾತಿಮಾ ರಜಿನಾ, ಮುಂಬೈ ಇಂಡೋರ್ ರಾಮ ಸಿಮೆಂಟ್ ಕಾರ್ಖಾನೆ ವ್ಯವಸ್ಥಾಪಕ ಹೆಚ್. ಸುಬ್ರಮಣ್ಯ, ಜಲಾನಯನ ಸಂಘದ ಅಧ್ಯಕ್ಷೆ ಮೀನಾಕ್ಷಿ ಗಂಗಾಧರ, ವೀರಾಜಪೇಟೆ ತಾಲೂಕು ಫೆಡರೇಶನ್ ಉದ್ಯೋಗಿ ಹೆಚ್.ಕೆ. ರವಿಕುಮಾರ್, ವೀರಾಜಪೇಟೆ ಅಂಚೆ ಕಚೇರಿ ನಿವೃತ್ತ ಸಹಾಯಕಿ ಹೆಚ್.ಎಂ. ಗಾಯತ್ರಿ, ಮಾನಸ ಯುವತಿ ಮಂಡಳಿ ಅಧ್ಯಕ್ಷೆ ಮಂಜುಳ ಕೃಷ್ಣಪ್ಪ ಭಾಗವಹಿಸಿ, ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಆರ್ಜಿ ಶ್ರೀ ವಿಘ್ನೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ಬಡಕಡ ರೇಷ್ಮ ಅರುಣ್ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಸ್ವಾಗತಿಸಿ, ವಂದಿಸಿದರು. ಪೂವಮ್ಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ ವಿವಿಧ ಓಟಗಳು, ಹಗ್ಗಜಗ್ಗಾಟ, ಬಾರದ ಕಲ್ಲಿನ ಎಸೆತ ಮುಂತಾದವುಗಳು ಜರುಗಿದವು.