ಗೋಣಿಕೊಪ್ಪಲು, ಜ. ೬: ಕಾವೇರಿ ಜಲಮೂಲ ಹೋರಾಟ ಸಂರಕ್ಷಣಾ ಅಭಿವೃದ್ಧಿ ವೇದಿಕೆಯ ನೂತನ ಪ್ರಬಾರ ಅಧ್ಯಕ್ಷರಾಗಿ ಟಿ.ಎಲ್. ಶ್ರೀನಿವಾಸ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನಗರದ ಸಿಲ್ವರ್ ಸ್ಕೆöÊ ಸಭಾಂಗಣದಲ್ಲಿ ತಾ. ೩ ರಂದು ಗೌರವಾಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ತುಷಾರ್ ಹೆಚ್. ಕುಲಕರ್ಣಿ, ಖಜಾಂಚಿಯಾಗಿ ವಿ.ಎಲ್. ಆನಂದ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಟಿ.ಎಲ್.ಶ್ರೀನಿವಾಸ್ ಅವರು, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ವಿಶೇಷ ಪ್ರಯತ್ನದಿಂದಾಗಿ ಗೋಣಿಕೊಪ್ಪಲು ಕೀರೆಹೊಳೆ ಹಾಗೂ ಕೈಕೇರಿ ತೋಡು ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆ ಮೂಲಕ ರೂ. ೯ ಕೋಟಿ ಅನುದಾನ ಬಿಡುಗಡೆ ಹಂತದಲ್ಲಿದೆ ಎಂದರು.

ಗೋಣಿಕೊಪ್ಪಲಿನಲ್ಲಿ ಜನದಟ್ಟಣೆ ದಿನೇ ದಿನೇ ಅಧಿಕವಾಗುತ್ತಿದ್ದು ಸ್ವಚ್ಛತೆ ಮಾಯವಾಗಿದೆ. ಜಲಮೂಲಗಳು ಕಲುಷಿತಗೊಂಡು ವಿಷಕಾರಿಯಾಗಿವೆ. ಇಲ್ಲಿನ ನೀರು ಲಕ್ಷö್ಮಣ ತೀರ್ಥ ಮುಂದೆ ಕಾವೇರಿಯನ್ನು ಸೇರುವದರಿಂದ ಪ್ರತಿಯೊಬ್ಬ ನಾಗರಿಕರು ಗೋಣಿಕೊಪ್ಪಲು ನಗರದ ಜಲಮೂಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕಾಗಿದೆ ಎಂದರು.

ಸಭೆಯಲ್ಲಿ ಪ್ರಮುಖವಾಗಿ ಗ್ರಾ.ಪಂ. ಸರ್ವ ಸದಸ್ಯರ ಸಭೆ ಕರೆದು ಜಾಗೃತಿ ಮೂಡಿಸುವುದು, ಹೋರಾಟ ವೇದಿಕೆಯ ಬ್ಯಾಂಕ್ ಖಾತೆ ತೆರೆಯುವದು, ಸದಸ್ಯತನ ಅಭಿಯಾನ, ನೋಂದಾವಣೆ, ಕಾನೂನು ಸಲಹೆಗಾರರ ನೇಮಕ, ಜಿಲ್ಲಾಧಿಕಾರಿ ಭೇಟಿ, ಜಿ.ಪಂ.ಸಿಇಓ ಭೇಟಿ, ಕಾವೇರಿ ನೀರಾವರಿ ನಿಗಮಕ್ಕೆ ಭೇಟಿ ನೀಡುವ ಬಗ್ಗೆ ಚರ್ಚೆ ನಡೆಯಿತು.ಸಭೆಯಲ್ಲಿ ಕಾರ್ಯದರ್ಶಿ ತುಷಾರ್ ಕುಲಕರ್ಣಿ ಹಾಗೂ ನಿಕಟಪೂರ್ವ ಅಧ್ಯಕ್ಷ ಪುಳಿಂಜನ ಪೂವಯ್ಯ ಅವರು ಸಂಘಟನೆಯ ಮುಂದಿನ ಯೋಜನೆಗಳ ಹಣಕಾಸು ವ್ಯವಸ್ಥೆಗೆ ಪೂರಕವಾಗಿ ನಿಧಿ ಸಂಗ್ರಹ ಮಾಡಿಕೊಡಲಾಗುವದು ಎಂದು ಹೇಳಿದರು.

ಗೌರವಾಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ನಿರ್ದೇಶಕರಾದ ನಾಮೇರ ದೇವಯ್ಯ, ಪ್ರಧಾನ ಕಾರ್ಯದರ್ಶಿ ತುಷಾರ್ ಕುಲಕರ್ಣಿ, ಖಜಾಂಚಿ ಆನಂದ್, ಉಪಾಧ್ಯಕ್ಷರಾದ ಟಾಟು ಮೊಣ್ಣಪ್ಪ, ಪಡಿಕಲ್ ಕುಸುಮಾವತಿ, ನಿಕಟ ಪೂರ್ವ ಅಧ್ಯಕ್ಷ ಪಿ.ಟಿ. ಪೂವಯ್ಯ, ಕೆ.ಪಿ. ಅಬ್ದುಲ್ ಜಲೀಲ್, ಟಿ.ಕೆ. ಖಾಲಿದ್, ಪಂಚಮಿ ಮುಂತಾದವರು ಮಾತನಾಡಿದರು.