ಮಡಿಕೇರಿ, ಜ. ೬: ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯಕ್ಕೆ ೬ನೇ ತರಗತಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

೬ನೇ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಯು ಪ್ರಸ್ತುತ(೨೦೨೨-೨೩) ಸಾಲಿನಲ್ಲಿ ೫ನೇ ತರಗತಿ ಓದುತ್ತಿರಬೇಕು. ವಿದ್ಯಾರ್ಥಿಯು ೨೦೧೧ ರ ಮೇ ೧ ರಿಂದ ೨೦೧೩ ರ ಏಪ್ರಿಲ್ ೩೦ ರೊಳಗೆ ಜನಿಸಿರಬೇಕು. ಕೊಡಗು ಜಿಲ್ಲೆಯ ನಿವಾಸಿಯಾಗಿರಬೇಕು. ಅರ್ಜಿಯನ್ನು ಆನ್‌ಲೈನ್ hಣಣಠಿs://ಟಿಚಿvoಜಚಿಥಿಚಿ.gov.iಟಿ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ೨೦೨೩ ರ ಜನವರಿ ೩೧ ಕೊನೆಯ ದಿನವಾಗಿದೆ. ಪ್ರವೇಶ ಪರೀಕ್ಷೆಯು ಏಪ್ರಿಲ್ ೨೯ ರಂದು ನಡೆಯಲಿದೆ. ಶಾಲೆಯ ಮುಖ್ಯೋಪಾಧ್ಯಾಯರಿಂದ ಸಹಿ ಮಾಡಿದ ನವೋದಯ ಅರ್ಜಿ, ಫೋಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮಗುವಿನ ಸಹಿ ಮತ್ತು ಪಾಲಕರ ಸಹಿ, ವಾಸಸ್ಥಳ, ಮಗುವಿನ ಆಧಾರ್ ಕಾರ್ಡ್ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ. ೯೬೬೩೮೮೩೨೧೩, ೯೯೦೧೪೨೩೨೭೩ನ್ನು ಸಂಪರ್ಕಿಸಬಹುದು ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.