ಮಡಿಕೇರಿ, ಜ. ೨: ಭ್ರಷ್ಟಾಚಾರ ಕಿತ್ತೊಗೆದು ಸ್ವಾಭಿಮಾನಿ ಭಾರತ ನಿರ್ಮಾಣ ಭಾರತೀಯ ಜನತಾ ಪಕ್ಷದ ಗುರಿಯಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಬಿಜೆಪಿ ರಾಷ್ಟç ನಾಯಕರ ಆದೇಶದಂತೆ ಭಾರತೀಯ ಜನತಾ ಪಕ್ಷ ಮಡಿಕೇರಿ ನಗರ ಮಂಡಲ ವತಿಯಿಂದ ವಿದ್ಯಾನಗರದ ೧೯೯ನೇ ಬೂತ್‌ನಲ್ಲಿ ಆಯೋಜಿಸಲಾಗಿದ್ದ ‘ಬೂತ್ ವಿಜಯ ಅಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಜೆಪಿಗೆ ಅಧಿಕಾರ ಮುಖ್ಯವಲ್ಲ, ಅಧಿಕಾರ ಹಿಡೀಯೋದಕ್ಕಾಗಿ ಪಕ್ಷ ಅಲ್ಲ; ದೇಶ ಕಟ್ಟಲು ಹೊರಟಿರುವವರಿಗೆ ಅಧಿಕಾರ ಬೇಕು; ಕಟ್ಟ ಕಡೆಯಲ್ಲಿರುವ, ಶಕ್ತಿಯಿಲ್ಲದವರಿಗೆ ಶಕ್ತಿ ತುಂಬುವುದು ಬಿಜೆಪಿಯ ಕೆಲಸವಾಗಿದೆ. ಈ ಒಂದು ಉದ್ದೇಶದಿಂದಲೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ, ಎಲ್ಲರಿಗೂ, ಎಲ್ಲರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವಂತಹ ಕಾರ್ಯ ಮಾಡಿದೆ. ಬಿಜೆಪಿ ಗೆದ್ದ ಕ್ಷೇತ್ರಗಳಿಗೆ ಮಾತ್ರ ಈ ಯೋಜನೆಗಳು ಸೀಮಿತವಾಗಿಲ್ಲ; ಪ್ರತಿಯೋರ್ವರಿಗೂ ಇದು ಅನ್ವಯವಾಗಲಿದೆ ಎಂದರು.

ಸ್ವಾಭಿಮಾನಿ, ಸ್ವಾವಲಂಬಿ ಭಾರತ ನಿರ್ಮಾಣವಾಗಬೇಕಾದರೆ ಪ್ರತಿಯೋರ್ವರಿಗೂ ಬಿಜೆಪಿ ಸರಕಾರದ ಯೋಜನೆ ಬಗ್ಗೆ ತಿಳಿಯಪಡಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆತಿವೆಯೇ ಎಂದು ಪರಿಶೀಲಿಸಿ ತಲುಪಿಸುವ ಕಾರ್ಯವಾಗಬೇಕು. ಇದು ಬೂತ್‌ಮಟ್ಟದ ಕಾರ್ಯಕರ್ತರ ಕರ್ತವ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ‘ಬೂತ್ ವಿಜಯ ಅಭಿಯಾನ’ ಆರಂಭಿಸಲಾಗಿದ್ದು, ಪ್ರತಿ ಬೂತ್‌ನಲ್ಲೂ ಪಕ್ಷ ಗೆಲುವು ಸಾಧಿಸಬೇಕು, ರಾಷ್ಟಿçÃಯ ನಿರ್ಮಾಣ ಕಾರ್ಯದಲ್ಲಿ ಸಂಘಟಿತ ಕಾರ್ಯಯೋಜನೆಯಾಗಬೇಕು. ಅಭಿವೃದ್ಧಿ ಆಧಾರದ ಮೇಲೆ ಗೆಲ್ಲುವುದು ಬಿಜೆಪಿಯ ಸಿದ್ಧಾಂತವಾಗಿದೆ ಎಂದು ಸಚಿವರು ಹೇಳಿದರು. ಮುಂದಿನ ಚುನಾವಣೆಯಲ್ಲಿ ಬೂತ್ ಮಟ್ಟದಿಂದ ಫಲಿತಾಂಶ ಪಡೆಯಬೇಕು; ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸು ವಂತಾಗಬೇಕೆAದು ಆಶಿಸಿದರು.

ಹೊಸ ಮತದಾರರನ್ನು ಸೇರಿಸಬೇಕು

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಬಿಜೆಪಿ ಸರಕಾರ ಕೈಗೊಂಡಿರುವ ಕಾರ್ಯಕ್ರಮಗಳ ಆಧಾರದಲ್ಲಿ ಗೆದ್ದು ಬಂದಿದೆ. ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧಾಪ್ಯದವರೆಗೂ ಪ್ರತಿಯೋರ್ವರಿಗೂ ಅನುಕೂಲ ವಾಗುವ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಬಗ್ಗೆ ಪ್ರತಿ ಮನೆ ಮನೆಗಳಿಗೆ ತಲುಪಿಸುವ ಕೆಲಸ ಬೂತ್ ಮಟ್ಟದ ಕಾರ್ಯಕರ್ತರಿಂದ ಆಗಬೇಕಿದೆ. ಇಂದಿನಿAದ ೧೦ ದಿವಸಗಳ ಅವಧಿಯಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಬೇಕೆಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಮಳೆಹಾನಿಗೆ ಸಂಬAಧಿಸಿದAತೆ ಬೆಳೆಗಾರರ ಖಾತೆಗಳಿಗೆ ಈಗಾಗಲೇ ನೇರವಾಗಿ ರೂ.೧೨೫ ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಎಲ್ಲರೂ ಸುಖವಾಗಿರಬೇಕೆಂಬುದೇ ಪಕ್ಷ ಹಾಗೂ ಸರಕಾರದ ಉದ್ದೇಶವಾಗಿದೆ. ಈ ಬಾರಿ ಹಲವಷ್ಟು ಮಂದಿ ಹೊಸ ಮತದಾರರಿದ್ದು, ಅವರುಗಳನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳುವ ಕಾರ್ಯ ಕಾರ್ಯಕರ್ತರಿಂದ ಆಗಬೇಕಿದೆ ಎಂದು ಹೇಳಿದರು.

ಸಿದ್ಧಾಂತದ ಪಕ್ಷ

ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಬಿಜೆಪಿ ದೇಶದ ಚಿಂತನೆಯೊAದಿಗೆ ಹಿರಿಯರು ಕಟ್ಟಿ ಬೆಳೆಸಿದ, ಸಿದ್ಧಾಂತವಿರುವ ಪಕ್ಷವಾಗಿದೆ. ಒಂದೇ ಆಚಾರ, ವಿಚಾರ, ಒಂದೇ ಕಾನೂನು ದೇಶದಲ್ಲಿರ ಬೇಕೆಂಬುದು ಚಿಂತನೆಯಾಗಿದೆ. ಸರ್ವರಿಗೂ

(ಮೊದಲ ಪುಟದಿಂದ) ಸವಲತ್ತುಗಳು ನೇರವಾಗಿ ಕೈ ಸೇರಬೇಕೆಂಬ ನಿಟ್ಟಿನಲ್ಲಿ ಹಲವಷ್ಟು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಜನತೆಗೆ ಉತ್ತಮ ಆಡಳಿತ ನೀಡಬೇಕೆಂಬುದು ಬಿಜೆಪಿ ಉದ್ದೇಶವಾಗಿದೆ. ಕಾರ್ಯಕರ್ತರು ಈ ಬಗ್ಗೆ ಮನೆ ಮನೆಗೆ ತಿಳಿಸಬೇಕು; ಮುಂದಿನ ಚುನಾವಣೆಯಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿಯೂ ಬಿಜೆಪಿ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.

ಶಶಕ್ತೀಕರಣಕ್ಕಾಗಿ ಕಾರ್ಯಕ್ರಮ

ರಾಷ್ಟಿçÃಯ ನಾಯಕ ಅಮಿತ್ ಶಾ ಅವರ ಚಿಂತನೆಯAತೆ ಪಕ್ಷವನ್ನು ಶಸಕ್ತಗೊಳಿಸುವ ಸಲುವಾಗಿ ತಾ. ೨ರಿಂದ ೧೨ರವರೆಗೆ ೧೦ ದಿವಸಗಳ ಕಾಲ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹೇಳಿದರು. ಪಕ್ಷವನ್ನು ಗಟ್ಟಿಮಾಡುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ರಾಜ್ಯದಾದ್ಯಂತ ಎಲ್ಲಾ ಮಂಡಲಗಳಲ್ಲಿ ಇಂದಿನಿAದ ಕಾರ್ಯಕ್ರಮ ಆರಂಭಗೊAಡಿದೆ. ಜಿಲ್ಲೆಯ ಎಲ್ಲಾ ೫೪೩ ಬೂತ್‌ಗಳಲ್ಲಿಯೂ ಅಭಿಯಾನ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಬೂತ್ ಅಧ್ಯಕ್ಷ ಸಂದೀಪ್, ವಾರ್ಡ್ ಸದಸ್ಯೆ ಚಿತ್ರಾವತಿ, ನಗರಸಭಾ ಸದಸ್ಯರುಗಳು, ಕಾರ್ಯಕರ್ತರು ಇದ್ದರು. ಜಿಲ್ಲಾ ವಕ್ತಾರ ಮಹೇಶ್ ಜೈನಿ ನಿರೂಪಿಸಿದರೆ, ನಗರ ಕಾರ್ಯದರ್ಶಿ ಕೆ.ಎಂ. ಅಪ್ಪಣ್ಣ ಸ್ವಾಗತಿಸಿದರು. ಉಪಾಧ್ಯಕ್ಷ ಬಿ.ಕೆ. ಜಗದೀಶ್ ವಂದಿಸಿದರು.