ಪಾಲಿಬೆಟ್ಟ, ಜ. ೩: ಘಟ್ಟದಳ್ಳ ಫ್ರೆಂಡ್ಸ್ ಚಾಲೆಂಜಿAಗ್ ಕ್ಲಬ್ ವತಿಯಿಂದ ಹುಂಡಿ ಗ್ರಾಮದ ಮೈದಾನದಲ್ಲಿ ಆಯೋಜಿಸಲಾಗಿದ್ದ ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಮಾಜಿ ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಚಾಲನೆ ನೀಡಿದರು. ಮಾಲ್ದಾರೆ ಸುತ್ತಮುತ್ತಲಿನ ೮ ತಂಡ ಗಳು ಪಂದ್ಯಾಟದಲ್ಲಿ ಪಾಲ್ಗೊಂಡವು. ಮುಖ್ಯಪೇದೆ ರಮೇಶ್, ಫ್ರೆಂಡ್ಸ್ ಚಾಲೆಂಜಿAಗ್ ಕ್ಲಬ್ ಅಧ್ಯಕ್ಷ ಸಂಪತ್, ಕಾರ್ಯದರ್ಶಿ ಇಳಂಗೂ ಸೇರಿದಂತೆ ಮತ್ತಿತರರು ಹಾಜರಿದ್ದರು.