ಮಡಿಕೇರಿ, ಜ. ೨: ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿರುವ ಪ್ರವಾಸಿ ತಾಣ ಇದೀಗ ಗ್ರೇಟರ್ ರಾಜಾಸೀಟ್ ಎಂದು ಪರಿವರ್ತನೆಯಾಗಿರುವ ತಾಣಕ್ಕೆ ಕಳೆದ ಒಂದು ತಿಂಗಳಿನಲ್ಲಿ ೧.೪೩ ಲಕ್ಷದಷ್ಟು ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಡಿಸೆಂಬರ್ ೧ರಿಂದ ೩೧ರ ತನಕ ೧,೪೩,೫೧೬ ಮಂದಿ ಉದ್ಯಾನವನಕ್ಕೆ ಭೇಟಿ ನೀಡಿದ್ದು, ರೂ. ೨೮,೭೦,೩೨೦ರಷ್ಟು ಹಣ ಸಂಗ್ರಹವಾಗಿದೆ. ಡಿಸೆಂಬರ್ ೧೫ರಿಂದ ೩೧ರ ತನಕ ೧೫ ದಿನಗಳ ಅವಧಿಯಲ್ಲೇ ೯೮,೦೪೦ ಮಂದಿ ಭೇಟಿ ನೀಡಿದ್ದು, ಈ ಅವಧಿಯಲ್ಲಿ ೧೯,೬೦,೮೦೦ ಹಣ ಸೇರಿದಂತೆ ಡಿಸೆಂಬರ್ ಮಾಸದಲ್ಲಿ ಒಟ್ಟು ರೂ.೨೮,೭೦,೩೨೦ರಷ್ಟು ಮೊತ್ತ ಸಂಗ್ರಹವಾಗಿದೆ ಎಂದು ತೋಟಗಾರಿಕಾ ಇಲಾಖಾ ಮೂಲದಿಂದ ತಿಳಿದುಬಂದಿದೆ.